ದಾವಣಗೆರೆ: ಶಾಲೆಯಲ್ಲಿ ಪಾಠ ಮಾಡುವಾಗಲೇ ಹೃದಯಾಘಾತದಿಂದ ಶಿಕ್ಷಕ ಮೃತಪಟ್ಟಿರುವ ಘಟನೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಪ್ರಾರ್ಥನೆ ಮುಗಿಸಿ ತರಗತಿ ಮಾಡುವಾಗ ಶಿಕ್ಷಕನಿಗೆ ಹೃದಯಾಘಾತವಾಗಿದೆ. ದಾವಣಗೆರೆ ತಾಲೂಕು ಮಹಾದೇವಿಪುರದ ನಿವಾಸಿ ಇಂಗ್ಲಿಷ್ ಶಿಕ್ಷಕ ವಿಜಯ್ ಕುಮಾರ್ (54) ಮೃತರಾಗಿದ್ದಾರೆ.
ಶಾಲೆಯಲ್ಲಿ ತರಗತಿ ಪಾಠ ಮಾಡುತ್ತಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕ ಮೃತಪಟ್ಟಿದ್ದಾರೆ. ಶಿಕ್ಷಕ ವಿಜಯ್ ಕುಮಾರ್‌ಗೆ ಇಬ್ಬರು ಮಕ್ಕಳಿದ್ದಾರೆ. ಶಿಕ್ಷಕನ ನಿಧನಕ್ಕೆ ಶಾಲೆ ಮಕ್ಕಳು, ಸಹ ಶಿಕ್ಷಕರು ಹಾಗೂ ಗ್ರಾಮದಲ್ಲಿ ದುಃಖದ ವಾತಾವರಣ ಮಡುಗಟ್ಟಿತ್ತು.



