ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ ವೀರೇಶ್ ಅವರ ಮನವಿಯ ಮೇರೆಗೆ ಸೇವೆಗೆ ಖ್ಯಾತ ಜವಳಿ ವರ್ತಕ ಬಿ.ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕರಾದ ಬಿ.ಸಿ ಉಮಾಪತಿ ಅವರು ಚಿಗಟೇರಿ ಆಸ್ಪತ್ರೆಯ ಕೊರೋನ ರೋಗಿಗಳಿಗೆ ನಿತ್ಯ ಬೆಳಿಗ್ಗೆ ಉಪಹಾರ ವ್ಯವಸ್ಥೆ ಮಾಡಿದ್ದಾರೆ. ಇನ್ನು ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ವತಿಯಿಂದ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.




