Connect with us

Dvgsuddi Kannada | online news portal | Kannada news online

ದಾವಣಗೆರೆ: ಹಾಲುವರ್ತಿ ಗ್ರಾಮದ ರೈತ ದ್ಯಾಮಣ್ಣನಿಗೆ ರಾಷ್ಟ್ರೀಯ ಕೃಷಿ ಜಾಗರಣೆ ಮಿಲೇನಿಯರ್ ಫಾರ್ಮರ್ ಪ್ರಶಸ್ತಿ

IMG 20231221 074630

ದಾವಣಗೆರೆ

ದಾವಣಗೆರೆ: ಹಾಲುವರ್ತಿ ಗ್ರಾಮದ ರೈತ ದ್ಯಾಮಣ್ಣನಿಗೆ ರಾಷ್ಟ್ರೀಯ ಕೃಷಿ ಜಾಗರಣೆ ಮಿಲೇನಿಯರ್ ಫಾರ್ಮರ್ ಪ್ರಶಸ್ತಿ

ದಾವಣಗೆರೆ: ತಾಲೂಕಿನ ಹಾಲುವರ್ತಿ ಗ್ರಾಮದ ಪ್ರಗತಿಪರ ರೈತ ದ್ಯಾಮಣ್ಣನಿಗೆ ನವದೆಹಲಿಯಲ್ಲಿ ನಡೆದ ಮಹೇಂದ್ರ ಟ್ರ್ಯಾಕ್ಟರ್ಸ್ ರಾಷ್ಟ್ರೀಯ ಕೃಷಿ ಜಾಗರಣೆ ಮಿಲೇನಿಯರ್ ಫಾರ್ಮರ್ ಪ್ರಶಸ್ತಿ ಲಭಿಸಿದೆ. ಕೃಷಿಯಲ್ಲಿ ಪ್ರಗತಿಪರ ಚಿಂತನೆ, ಕ್ರಿಯಾಶೀಲತೆ ಮೈಗೂಡಿಸಿರುವ ಇವರಿಗೆ ದಾವಣಗೆರೆ ಐಸಿಎಆರ್ -ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ನಾಮ ನಿರ್ದೇಶನ ಮಾಡಿತ್ತು.

ಕೇಂದ್ರ ಸಚಿವ ಸಾಧ್ವನಿರಂಜನ್‌ ಜ್ಯೋತಿ, ಗುಜರಾತ್‌ ರಾಜ್ಯಪಾಲ ಆಚಾರ್ಯ ದೇವವ್ರತ್ ರಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ದ್ಯಾಮಣ್ಣ, ತಮ್ಮೆಲ್ಲ ಬೆಳೆವಣಿಗೆಗೆ ಕಾರಣೀಭೂತರಾದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಚಿರಋಣಿಯಾಗಿರುವ ಎಂದು ಹರ್ಷ ವ್ಯಕ್ತಪಡಿಸಿದರು.

ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥರಾದ ಡಾ.ಟಿ.ಎನ್.ದೇವರಾಜ, ತಮ್ಮ ಮಾರ್ಗದರ್ಶನದಲ್ಲಿ ಮೀನು ಜಲಕೃಷಿ ಕೈಗೊಂಡು ಯಶಸ್ವಿಯಾದ ಪ್ರಗತಿಪರ ರೈತರಲ್ಲಿ ಒಬ್ಬರು. ಲಾಭದಾಯಕ ಕೃಷಿಯಲ್ಲಿ ಬಂಡವಾಳ ರಹಿತವಾಗಿ ನೈಸರ್ಗಿಕ ಕಷ್ಟಗಳನ್ನು ಅಪ್ಪಿಕೊಂಡು ಬೇಸಾಯ ಮಾಡುವುದು
ದ್ಯಾಮಣ್ಣನವರು ಸಿದ್ಧಹಸ್ತರು ಎಂದರು.

ತೋಟಗಾರಿಕೆವಿಜ್ಞಾನಿಎಂ.ಜಿ.ಬಸವನಗೌಡ ಮಾತನಾಡಿ, ತಮ್ಮ ಮಾರ್ಗದರ್ಶನದಲ್ಲಿ ಮಳೆನೀರು ಕೊಯ್ದು ಮಾಡಿ ಒಂದು ಎಕರೆ ಕೃಷಿ ಹೊಂಡವನು ತೋಟಗಾರಿಕೆ ಇಲಾಖೆ ಅನುದಾನದಲ್ಲಿ ನಿರ್ಮಿಸಿ ಯಶಸ್ವಿಯಾಗಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು,‌ ಗುಲಾಬಿಯನ್ನು ಬೆಳೆಯುತ್ತಿದ್ದಾರೆ. ಈರುಳ್ಳಿಯಲ್ಲಿ
‘ಭೀಮಾಶಕ್ತಿ’ ತಳಿಯ ಯಶಸ್ವಿ ಬೆಳೆ, ಜಿಲ್ಲೆಯಲ್ಲಿ
ಪ್ರಥಮಬಾರಿಗೆ ಕುರ್ಫಿ ಜ್ಯೋತಿ ಆಲೂಗಡ್ಡೆ ಬೆಳೆದ ಹೆಮ್ಮೆಯ ರೈತ ದ್ಯಾಮಣ್ಣ ಎಂದು ತಿಳಿಸಿದರು.

ಕಾರ್ಯದರ್ಶಿ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಡಾ.ಕೆ.ಪಿ.ಬಸವರಾಜಪ್ಪ ಮಾತನಾಡಿ, ಕೃಷಿಯಲ್ಲಿ ವಿನೂತನ ತಾಂತ್ರಿಕತೆಗಳ ಕರಗತವಾಗಿ ಅರಿತು ಮಾಡುವುದು ಇವರಿಗೆ ಬಹಳ ಸುಲಭ. ಜೊತೆಗೆ ಕೃಷಿ ಕುಟುಂಬವನ್ನು ಲಾಭದಾಯಕವಾಗಿ ಮುನ್ನಡೆಸುವಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವುದು, ಜಿಲ್ಲೆಯ‌ಇತರೆ ರೈತರಿಗೆ ಮಾದರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ತಜ್ಞ ಬಿ.ಒ.ಮಲ್ಲಿಕಾರ್ಜುನ ಬೇಸಾಯ ಇತರರಿದ್ದರು.‌ ದ್ಯಾಮಣ್ಣನವರ ಈ ಸಾಧನೆಗೆ ತರಳಬಾಳು ಜಗದ್ಗುರುಗಳಾದ ಡಾ.ಶಿವಮೂರ್ತಿ‌ ಶಿವಾಚಾರ್ಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದು,ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕರು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ
ಅಭಿನಂದನೆ ಸಲ್ಲಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top