ದಾವಣಗೆರೆ: 2022-23ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಡಿಯಲ್ಲಿ ಬರುವ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ತಾಲ್ಲೂಕು ಬಾಲಭವನ ಸಮಿತಿ ವತಿಯಿಂದ ಮೇ.10 ರಿಂದ 17 ರವರೆಗೆ 8 ದಿನಗಳ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.
5 ವರ್ಷದಿಂದ 16 ವರ್ಷದ ವಯೋಮಾನದೊಳಗಿನ ಆಸಕ್ತ ಮಕ್ಕಳು ಈ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಪಾಸ್‍ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ದುರ್ಗಾಂಬಿಕಾ ಶಾಲೆ ಮುಂಭಾಗ, ಸರಸ್ವತಿ ಬಡಾವಣೆ ಇಲ್ಲಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮೇ-10 ಕೊನೆಯ ದಿನವಾಗಿರುತ್ತದೆ. ಕೇವಲ 50 ಮಕ್ಕಳಿಗೆ ಮಾತ್ರ ಈ ಶಿಬಿರ ಸೀಮಿತವಾಗಿರುತ್ತದೆ. ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನಕಲೆ, ಸಮೂಹ ನೃತ್ಯ, ಕಸದಿಂದ ರಸ, ಯೋಗ, ಯೋಗಾಭ್ಯಸ ಚಟುವಟಿಕೆಗಳು ಇರುತ್ತದೆ.
ಶಿಬಿರ ನಡೆಯುವ ಸ್ಥಳ ಶ್ರೀ ದುರ್ಗಾಂಬಿಕಾ ಫ್ರೌಢಶಾಲೆ, ಹೊಂಡದ ಸರ್ಕಲ್ ಹತ್ತಿರ ದಾವಣಗೆರೆ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-263213 ನ್ನು ಸಂಪರ್ಕಿಸಬಹುದೆಂದು ತಾಲ್ಲೂಕು ಬಾಲಭವನದ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



