ದಾವಣಗೆರೆ: ಸುಕನ್ಯಾ ಸಮೃದ್ದಿ ಯೋಜನೆ (sukanya samriddhi yojana) ಅಡಿಯಲ್ಲಿ ಸಾರ್ವಜನಿಕರಿಗೆ ಒಟ್ಟು 1,08,500/- ರೂ ಗಳನ್ನು ವಂಚಿಸಿ (Cheating) ಅಧಿಕಾರ ದುರುಪಯೋಗ( misuse) ಪಡಿಸಿಕೊಂಡ ಅಂಚೆಪಾಲಕಗೆ (Post man) 01 ವರ್ಷ 06 ತಿಂಗಳಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000/-ರೂ ದಂಡ ವಿಧಿಸಲಾಗಿದೆ.
ದಿನಾಂಕ:24/09/2017 ರಂದು ದೂರುದಾರ (Complainant) ಗಣೇಶ, ಸಹಾಯಕ ಅಂಚೆ ಅಧೀಕ್ಚಕರು, ಶಿವಮೊಗ್ಗ ಪೂರ್ವ ವಿಭಾಗ, ಶಿವಮೊಗ್ಗ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ನೀಡಿದ್ದರು. ಚಿರಡೋಣಿ ಅಂಚೆಪಾಲಕ ಶ್ರೀಕಾಂತ್ ಕೆ.ಆರ್ , ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಸಾರ್ವಜನಿಕರಾದ 1)ಯಶಶ್ವಿನಿ ಸುಕನ್ಯ ಸಮೃದ್ಧಿ ಖಾತೆ ನಂ:6136566171 ನೇ ಖಾತೆಗೆ ಜಮಾ ಮಾಡಲು ನೀಡಿದ ಹಣ ಒಟ್ಟು-64,000 , 2)ಸಿ.ಎಂ ದೀಕ್ಷಾ ಖಾತೆ ನಂ:6136565441 ನೇ ಖಾತೆಗೆ ಒಟ್ಟು 10,500/, 3)ಮೇಘನಾ ಎಸ್.ಎಂ, ಖಾತೆ ನಂ:6136565523 ನೇ ಖಾತೆಗೆ ಒಟ್ಟು 15,000/-ರೂ, 4)ಎಂ.ಜಿ ಸಹನಾ ಖಾತೆ ನಂ:6136565509 ನೇ ಖಾತೆಗೆ ಒಟ್ಟು 19,000 ಇವರ ಖಾತೆಗಳಿಂದ ಒಟ್ಟು 1,08,500/-ರೂ ಗಳನ್ನು ವಂಚಿಸಿದ್ದಾರೆ.
ಮಾಸಿಕವಾಗಿ ಅಂಚೆ ಇಲಾಖೆಗೆ ಜಮಾಮಾಡಲು ಪಡೆದುಕೊಂಡು ಖಾತೆದಾರರ ಪಾಸ್ ಪುಸ್ತಕದಲ್ಲಿ ದಿನಾಂಕ & ಅಂಚೆ ಮುದ್ರೆ ಹಾಕಿ ಹಿಂದುರುಗಿಸಿದ್ದು ಪಡೆದುಕೊಂಡ ಹಣವನ್ನು ಅಂಚೆ ಇಲಾಖೆಯ ಲೆಕ್ಕ ಶಿರ್ಷಿಕೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ಜನರಿಗೆ ಮೋಸ ಮಾಡಿದ್ದು, ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತ ನೀಡಿದ ದೂರಿನ ಮೇರೆಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ತನಿಖಾಧಿಕಾರಿ ಉಪನಿರೀಕ್ಷಕಿ ಕಿಲೋವತಿ ನಿಖೆ ಕೈಗೊಂಡು ಆರೋಪಿ ಶ್ರೀಕಾಂತ ಕೆ.ಆರ್ ಈತನು ಸಾರ್ವಜನಿಕರಿಂದ ಸುಕನ್ಯಾ ಸಮೃದ್ಧಿ ಯೋಜನೆತಡಿ ಹಣಪಡೆದು ಸಾರ್ವಜನಿಕರ ಖಾತೆಗೆ ಜಮಾ ಮಾಡದೇ ಒಟ್ಟು 1,08,500/-ರೂ ಗಳನ್ನು ವಂಚನೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿರುವುದರಿಂದ ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಈ ಸಂಬಂಧ ಪ್ರಧಾನವಸಿಜೆ & ಜೆಎಂಎಫ್‌ಸಿ ನ್ಯಾಯಾಲಯ, ಚನ್ನಗಿರಿ ಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿದ್ದಲಿಂಗಯ್ಯ .ಬಿ ಗಂಗಾಧರಮಠ ರವರು ಅಪರಾಧಿ ಶ್ರೀಕಾಂತ್ ಕೆ.ಆರ್ (31) ಅಂಚೆ ಪಾಲಕರು, ಚಿರಡೋಣಿ ಪೋಸ್ಟ್ ಆಫೀಸ್, ವಾಸ: ಚಿರಡೋಣಿ ಗ್ರಾಮ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ. ಇವರೇಲೆ ಆರೋಪ ಸಾಬೀತಾಗಿದ್ದರಿಂದ ದಿನಾಂಕ:28-01-2025 ರಂದು ಆರೋಪಿತನಿಗೆ 01 ವರ್ಷ 06 ತಿಂಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000/- ರೂ ದಂಡ ವಿಧಿಸಿ ತೀರ್ಪು ನೀಡಿರುತ್ತದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಂಜವ್ವ ದಾಸರ್ ರವರು ನ್ಯಾಯ ಮಂಡನೆ ಮಾಡಿದ್ದರು.