ದಾವಣಗೆರೆ: ಸುಬಿಕ್ಷಾ ಫೌಂಡೇಷನ್ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾಸ್ಕ್ ಅಭಿಯಾನ ಕೈಗೊಳ್ಳಲಾಯಿತು.
ಡಿವೈಎಸ್ ಪಿ ನಾಗೇಂದ್ರ ಐತಾಳ್ , ಬಡಾವಣೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಗುರು ಬಸವರಾಜ್ , ಅಗ್ನಿಶಾಮ ಇಲಾಖೆಯ ಬಸವಪ್ರಭು ಶರ್ಮ , ವೃತ್ತ ನಿರೀಕ್ಷಕ ಗಜೇಂದ್ರ, ಮಹಿಳಾ ಪೊಲೀಸ್ ಮಾಳಮ್ಮ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕೆರಿಗೆ ಮಾಸ್ಕ್ ವಿತರಿಸಿ ಕೊರೊನಾ ಅರಿವು ಮೂಡಿಸಿದರು.

ಮಾಸ್ಕ್ ಹಾಕಿಕೊಳ್ಳದವರಿಗೆ ಓಡಾಡುತ್ತಿರುವರಿಗೆ ಸ್ವತಃ ಪೊಲೀಸರು ಮಾಸ್ಕ್ ಹಾಕಿಸಿದರು.ಈ ವೇಳೆ ಸುಬಿಕ್ಷಾ ಫೌಂಡೇಷನ್ ಕಾರ್ಯದರ್ಶಿ ಸೌಮ್ಯ, ಸದಸ್ಯರಾದ ಆಶಾ ಮರಿಯೋಜಿರಾವ್ , ಶ್ವೇತ, ಭಾಗ್ಯ, ಮಣಿ, ಜಯಂತ್ ಉಪಸ್ಥಿತರಿದ್ದರು.



