ದಾವಣಗೆರೆ: ಸಾದರ ಲಿಂಗಾಯತ ನೌಕರರ ಬಳಗ ವತಿಯಿಂದ 2020-21 ನೇ ಸಾಲಿನಲ್ಲಿ ಸರ್ಕಾರಿ ಕೋಟಾದಡಿ ಪ್ರಥಮ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಾರ್ಷಿಕ 10 ಸಾವಿರದಂತೆ 5 ವರ್ಷ ಅರ್ಥಿ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಮಾರ್ಚ್ 30ರೊಳಗೆ ಪಿಯುಸಿ ಅಂಕಪಟ್ಟಿ, ವೈದ್ಕೀಯ ಕಾಲೇಜಿನ ದಾಖಲಾತಿ, ನೀಟ್ ರ್ಯಾಂಕ್ ನ ಜೆರಾಕ್ಸ್ ಪ್ರತಿಗಳು ಹಾಗೂ ಊರಿನ ಇಬ್ಬರು ಮುಖಂಡರ ಮೊಬೈಲ್ ಸಂಖ್ಯೆಯನ್ನು ನೀಡಬೇಕು ಎಂದು ಬಳಗದ ಜಿಲ್ಲಾ ಅಧ್ಯಕ್ಷ ಕೆ.ನಾಗಪ್ಪ ತಿಳಿಸಿದ್ದಾರೆ.
ವಿಳಾಸ: ಕ.ನಾಗಪ್ಪ, ಅಧ್ಯಕ್ಷರು ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರ ಬ್ಯಾಂಕ್ , ಡೋರ್ ನಂ. 1645,145, ವಿದ್ಯಾನಗರ ಮುಖ್ಯ ರಸ್ತೆ, ಅಂಚೆ ಕಚೇರಿ ಎದುರು, ದಾವಣಗೆರೆ-57700, ಹೆಚ್ಚಿನ ಮಾಹಿತಿಗೆ 9844369744, 9448439662, 9844501366 ಸಂಪರ್ಕಿಸಿ.



