ದಾವಣಗೆರೆ: ನಗರದ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಶಾಲೆಯಲ್ಲಿ 5ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದ ಬಾಲಕ ರಂಗನಾಥ್ (9) ಮೇಲೆ ಬಾಯ್ಲರ್ ಡ್ರಮ್ (Boiler drum)ಮುರಿದು ಬಿದ್ದು ಸಾವನ್ನಪ್ಪಿದ ಪ್ರಕರಣ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯ (Headmaster) ಮತ್ತು ವಾರ್ಡನ್ (Warden) ನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಾರ್ಡನ್ ರವರನ್ನು ಕೆಟಿಜೆ ನಗರ ಪೊಲೀಸ್ (KTJ NAGARA POLICE) ಠಾಣೆಯ ಇನ್ಸ್ ಪೆಕ್ಟರ್ ಮತ್ತು ಪಿಎಸ್ಐ ಹಾಗೂ ಸಿಬ್ಬಂದಿ ಬಂಧಿಸಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಹರಿಹರ ತಶಲ್ಲೂಕಿನ ಜಿಗಳಿ ಗ್ರಾಮದ ಬಾಲಕನ ತಂದೆರಾಮಪ್ಪ ಕೆ.ಆರ್ ನೀಡಿದದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ನ 11 ವರ್ಷದ ಮಗ ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಪರಿಶಿಷ್ಠ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದು. ಶಾಲೆಯ ಮೇಲ್ಭಾಗದಲ್ಲಿರುವ ಬಾಯ್ಲರ್ ಶಿಥಿಲಗೊಂಡಿದ್ದು ಪ್ರಾಣಕ್ಕೆ ಸಂಚಕಾರವನ್ನುಂಟು ಮಾಡುತ್ತದೆ ಎಂದು ಗೊತ್ತಿದ್ದರು ಸಹ ದಿನಾಂಕ:03-02-2025 ರಂದು ಬೆಳಗ್ಗೆ 09-00 ಎಎಂ ಗಂಟೆಗೆ ಶಾಲೆಯ ವಾರ್ಡನ್ ರವರು ಮೃತ ಬಾಲಕಿನಿಗೆ ಹಾಗೂ ಆತನ ಸ್ನೇಹಿತರಿಗೆ ಸದರಿ ಶಾಲೆಯ ಮೇಲ್ಭಾಗದಲ್ಲಿರುವ ಬಾಯ್ಲರ್ ಗೆ ಉರಿ ಹಾಕಿ ಬರುವಂತೆ ಹೇಳಿ ಕಳುಹಿಸಿದ್ದರು.ಬಾಯ್ಲರ್ ಗೆ ಉರಿ ಹಾಕುತ್ತಿರುವಾಗ ಶಿಥಿಲಗೊಂಡಿದ್ದ ಬಾಯ್ಲರ್ ಮೃತ ಬಾಲಕನ ಮೇಲೆ ಬಿದ್ದು. ದೇಹದ ಒಳಭಾಗದಲ್ಲಿ ಪೆಟ್ಟು ಬಿದ್ದಿದ್ದರು ಸಹ ಯಾವುದೇ ಚಿಕಿತ್ಸೆಯನ್ನು ಕೊಡಿಸದೇ ಮಗನ ಸಾವಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಾರ್ಡನ್ ಹಾಗೂ ಶಾಲೆಯ ಆಡಳಿತ ಮಂಡಳಿ ಕಾರಣರಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಉಮಾಪ್ರಶಾಂತ್, ಎಎಸ್ಪಿ ವಿಜಯಕುಮಾರ.ಎಂ ಸಂತೋಷ ಮತ್ತು ಶ್ರೀಯುತ ಮಂಜುನಾಥ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶರಣಬಸವೇಶ್ವರ. ಬಿ. ನೇತೃತ್ವದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸುನೀಲ್ ಕುಮಾರ. ಹೆಚ್ ಎಸ್ ಮತ್ತು ಪಿಎಸ್ಐ ಲತಾ.ಆರ್ ಅವರಿಗೆ ಪ್ರಕರಣದ ಸೂಕ್ತ ತನಿಖೆಯನ್ನು ಮಾಡಿ ತಪ್ಪಿಸ್ಥರನ್ನು ಬಂಧನ ಮಾಡುವಂತೆ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು.