ದಾವಣಗೆರೆ: ಹೊಟ್ಟೆನೋವಿನ ಔಷಧಿ ಬದಲು ಕ್ರಿಮಿನಾಶಕ ಸೇವಿಸಿ ಎಂಬಿಎ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ.ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸತೇಬೆನ್ನೂರು ಬಳಿಯ ವೆಂಕಟೇಶ್ವರ ಕ್ಯಾಂಪ್‌ನ ವಿಜಯ್ ಕೃಷ್ಣ (24) ಹೊಟ್ಟೆನೋವಿನ ಔಷಧಿ ಬದಲು ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾನೆ. ಈ ಯುವಕ ದಾವಣಗೆರೆ ವಿ.ವಿಯಲ್ಲಿ ಎಂಬಿಎ ಓದುತ್ತಿದ್ದನು.
ಡೈಲಿ ಮನೆಯಿಂದ ಕಾಲೇಜಿಗೆ ಓಡಾಡಿಕೊಂಡು ಓದುತ್ತಿದ್ದು, ಬಹಳ ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಾಟಿ ಔಷಧಿ, ಚಿಕಿತ್ಸೆಗೂ ಹೊಟ್ಟೆನೋವು ಸರಿ ಆಗಿರಲಿಲ್ಲ. ಮಧ್ಯಾಹ್ನ ಕ್ರಿಮಿನಾಶಕ ಸೇವಿಸಿ ಒದ್ದಾಡುತ್ತಿದ್ದ ಯುವಕನನ್ನು ತ್ಯಾವಣಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಂದ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ವಿಜಯ್ ಸಾವನ್ನಪ್ಪಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.