ದಾವಣಗೆರೆ: ಭಾರತದ ಯುವಜನರು ಸ್ಥಾಪಿಸಿರುವ ಸ್ಟಾರ್ಟ್ ಅಪ್‍ಗಳು ತಮ್ಮ ಸಂಶೋಧನೆ ಹಾಗೂ ಸಾಮರ್ಥ್ಯಕ್ಕಾಗಿ ಜಾಗತಿಕ ಮನ್ನಣೆಗಳಿಸಿವೆ. ನವಯುವ ಡಿಜಿಟಲ್ ಉದ್ದಿಮೆದಾರ ಕನಸಿಗೆ ಇಂಬು ಕೊಡುವ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ(ಎಸ್.ಟಿ.ಪಿ.ಐ) ಸೆಂಟರ್ ಸ್ಥಾಪಿಸಲಾಗಿದೆ.ಈ ಸೌಲಭ್ಯ ಬಳಸಿಕೊಂಡು ಯುವ ಜನರ ಸ್ಟಾರ್ಟ್ ಆಫ್ ತೆರೆಯಲು ಮಂದಾಗ ಬೇಕು ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಶುಕ್ರವಾರ ದಾವಣಗೆರೆಯ ಜಿ.ಹೆಚ್.ಪಾಟೀಲ್ ನಗರದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಿರುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕೇಂದ್ರವನ್ನು ವರ್ಚುಯಲ್ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಜಿ-20 ರಾಷ್ಟ್ರಗಳು ಹಾಗೂ ಜಾಗತಿಕ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ ಅಧ್ಯಕ್ಷ ರಾಷ್ಟ್ರವಾಗಿದೆ. ಭಾರತ ಇಂದು ಬೇರೆ ರಾಷ್ಟ್ರಗಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಬಳಕೆಯ ರಾಷ್ಟ್ರವಾಗಿ ಉಳಿದಿಲ್ಲ. ಯುವ ಜನತೆ ಆವಿಷ್ಕಾರಗಳ ಫಲವಾಗಿ ಬೇರೆ ರಾಷ್ಟ್ರಗಳ ಕಂಪನಿ ಹಾಗೂ ಬಳಕೆದಾರರಿಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ರಾಷ್ಟ್ರವಾಗಿ ಬದಲಾಗಿದೆ ಎಂದರು
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಜಿಟಲ್ ಹಾಗೂ ತಂತ್ರಜ್ಞಾನ ಲಾಭಗಳು ದೇಶದ ಸಣ್ಣ ಪುಟ್ಟ ನಗರದ ಯುವ ಜನರಿಗೆ ಲಭಿಸಬೇಕು ಎಂಬ ಆಶಯ ಹೊಂದಿದ್ದಾರೆ. ಇದರ ಸಾಕರಕ್ಕಾಗಿ ಬಿಯಾಂಡ್ ಬೆಂಗಳೂರು ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲವಿದೆ. ಇದೇ ರೀತಿಯಾಗಿ ದೇಶದ ಎಲ್ಲಾ ನಗರಗಳಲ್ಲಿ ಸಂಶೋಧನೆ, ಆವಿಷ್ಕಾರಗಳಿಗೆ ಇಂಬು ಕೊಡುವ ನಿಟ್ಟಿನಲ್ಲಿ ಹೊಸ ಸ್ಟಾರ್ಟ್ ಅಪ್ ಇನ್‍ಕ್ಯುಬೇಷನ್ ಸೆಂಟರ್‍ಗಳನ್ನು ತೆರೆಯಲಾಗುವುದು ಎಂದರು .
ಕಳೆದ ನಾಲ್ಕೈದು ವರ್ಷಗಳಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. 104 ಯುನಿಕಾರ್ನ್ ಕಂಪನಿಗಳು, 75 ಸಾವಿರ ಸ್ಟಾರ್ಟ್ ಅಪ್ ಗಳು ಉದ್ದಿಮೆಗಳು ಸ್ಥಾಪಿಸಲ್ಪಟ್ಟಿವೆ. ದೇಶದಲ್ಲಿ ಡಿಜಿಟಲ್ ಉದ್ದಿಮೆಗಳು ಇನ್ನೂ ಹೆಚ್ಚಾಗಲಿವೆ. 2014 ರಲ್ಲಿ ಭಾರತ ಶೇ. 92 ರಷ್ಟು ಮೊಬೈಲ್‍ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು ದೇಶದ ಬಳಸುತ್ತಿರುವ ಶೇ.97 ರಷ್ಟು ಮೊಬೈಲ್‍ಗಳು ಭಾರತದಲ್ಲಿ ಉತ್ಪಾದನೆಯಾಗಿವೆ. 2014 ರಲ್ಲಿ ಮೊಬೈಲ್‍ಗಳ ರಫ್ತು ಶೂನ್ಯವಾಗಿತ್ತು. ಇಂದು 72 ಸಾವಿರ ಕೋಟಿ ಮೊತ್ತದ ಮೊಬೈಲ್ ರಪ್ತು ಮಾಡಲಾಗುತ್ತಿದೆ. ಮೇಡಿನ್ ಇಂಡಿಯಾ ಮೊಬೈಲ್‍ಗಳು ಯೂರೋಪ್, ಅಮೇರಿಕಾ, ಆಫ್ರಿಕಾ ಖಂಡಗಳಿಗೆ ರಫ್ತಾಗುತ್ತಿವೆ. ದಾವಣಗೆರೆ ಯುವ ಜನತೆ ಎಸ್.ಟಿ.ಪಿ.ಐ ಸೆಂಟರ್ ಬಳಸಿ ನೂತನ ಸ್ಟಾರ್ಟ್ ಅಪ್‍ಗಳನ್ನು ತೆರೆಯಬೇಕು ಎಂದರು.
ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಮಾತನಾಡಿ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಉದ್ದಿಮೆದಾರರನ್ನು ಉತ್ತೇಜಿಸುವ ಸಲುವಾಗಿ ದಾವಣಗೆರೆ ನಗರದಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಈ ಸಂಸ್ಥೆ ತೆರೆಯಲಾಗಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರೀಸರ್ಚ್ ಅಂಡ್ ಡೆವೆಲಪ್‍ಮೆಂಟ್, ಇನ್ನೋವೇಷನ್, ಸ್ಟಾರ್ಟ್‍ಪ್‍ಗಳನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಎಸ್.ಟಿ.ಪಿ.ಐ ಕೆಲಸ ಮಾಡಲಿದೆ. 1993 ರಲ್ಲಿ ಎಸ್.ಟಿ.ಪಿ.ಐ ರಫ್ತು ಪ್ರಮಾಣ ಕೇವಲ 39 ಕೋಟಿಯಷ್ಟಿತ್ತು. 2020- 21 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯದ ಸಾಫ್ಟ್‍ವೇರ್ ರಫ್ತು ಪ್ರಮಾಣ 2.00 ಲಕ್ಷ ಕೋಟಿಯನ್ನು ದಾಟಿದೆ. ದಾವಣಗೆರೆ ಈಗಾಗಲೇ ಶೈಕ್ಷಣಿಕ ನಗರಿ ಎಂದು ಖ್ಯಾತಿಯನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ದಾವಣಗೆರೆಯಲ್ಲಿ ಸಾಫ್ಟ್‍ವೇರ್ ಉದ್ಯಮವನ್ನು ಬೆಳೆಸಬೇಕು. ಮುಂದೊಂದು ದಿನ ದಾವಣಗೆರೆ ನಗರ ಕರ್ನಾಟಕದ ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
2015 ರಲ್ಲಿ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವರಾದ ರವಿಶಂಕರ್ ಪ್ರಸಾದ್‍ರವನ್ನು ಭೇಟಿ ಮಾಡಿ ದಾವಣಗೆರೆಯಲ್ಲಿ ಎಸ್.ಟಿ.ಪಿ.ಐ ಕೇಂದ್ರ ಸ್ಥಾಪನೆಗೆ ಮನವಿ ಮಾಡಲಾಗಿತ್ತು.ಅಂತಿಮವಾಗಿ 2018 ನವೆಂಬರ್‍ನಲ್ಲಿ ದಾವಣಗೆರೆಯಲ್ಲಿ ಸಾಫ್ಟ್‍ವೇರ್ ಪಾರ್ಕ್ ಸ್ಥಾಪನೆ ಮಾಡಲು ಅನುಮೋದನೆ ಸಿಕ್ಕಿತು. ಸಾಫ್ಟ್‍ವೇರ್ ಪಾರ್ಕ್ ಸ್ಥಾಪನೆಗಾಗಿ ನಗರಕ್ಕೆ ಹೊಂದಿಕೊಂಡಂತೆ 2 ಎಕರೆ ಜಮೀನು ಕೊಡಬೇಕು ಹಾಗೂ ಸ್ವಂತ ಕಟ್ಟಡ ನಿರ್ಮಾಣ ಆಗುವವರೆಗೆ 10 ಸಾವಿರ ಚದುರ ಅಡಿ ಜಾಗವನ್ನು ಈ ಕೇಂದ್ರ ನಡೆಸಲು ಜಿಲ್ಲಾಡಳಿತ ಉಚಿತವಾಗಿ ನೀಡಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸೇರಿದ ಈ ಕಟ್ಟಡದಲ್ಲಿ ಜಾಗ ನೀಡಲು ವಿಶ್ವವಿದ್ಯಾನಿಲಯದ ಅಂದಿನ ವೈಸ್ ಚಾನ್ಸೆಲರ್ ಡಾ.ಎಸ್.ವಿದ್ಯಾಶಂಕರ್ ಅವರಿಂದ ಅನುಮತಿ ಪಡೆಯಲಾಗಿದೆ. ಎಸ್.ಟಿ.ಪಿ.ಐ ಕಟ್ಟಡದ ಶಾಶ್ವತ ಸ್ಥಾಪನೆಗಾಗಿ ದಾವಣಗೆರೆ ಹರಿಹರ ಮಧ್ಯೆ ದೊಗ್ಗಳ್ಳಿ ರೈಲ್ವೆ ಜಂಕ್ಷನ್ ಬಳಿ ಜಮೀನು ಗುರುತಿಸಲಾಗಿದೆ. ಶೀಫ್ರವಾಗಿ ಜಮೀನು ಮಂಜೂರು ಮಾಡಲಾಗವದು ಎಂದರು ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಮತ್ತು ಎಲೆಕ್ಟ್ರಾನಿಕ್ಸ್ ಹಾರ್ಡ್‍ವೇರ್ ಟೆಕ್ನಾಲಜಿ ಪಾರ್ಕ್‍ಗಳನ್ನು ಅನುಷ್ಠಾನಗೊಳಿಸಲು ಎಸ್.ಟಿ.ಪಿ.ಐ ಸಿಂಗಲ್ ಎಂಡೋ ಆಗಿ ಕೆಲಸ ನಿರ್ವಹಿಸಲಿದೆ ಎಂದರು.
ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಬಿ.ಎ.ಬಸವರಾಜ ಹಾಗೂ ಐಟಿ, ಬಿಟಿ, ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ, ಕೈಗಾರಿಕೆ ವಾಣಿಜ್ಯ ಇಲಾಖೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ವರ್ಚುಯಲ್ ಆಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರದ ಮೂರು ಸ್ಟಾರ್ಟ್ ಅಪ್ ಕಂಪನಿಗಳಿಗೆ ಎಸ್.ಟಿ.ಪಿ.ಐ ಇನಕ್ಯಬಿಕೇಶನ್ ಸೆಂಟರ್ ಅಲಾಟಮೆಂಟ್ ಪತ್ರಗಳನ್ನು ವಿತರಿಸಲಾಯಿತು.
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ಮಹಾನಗರ ಪಾಲಿಕೆ ಮೇಯರ್ ಆರ್.ಜಯಮ್ಮ ಗೋಪಿನಾಯ್ಕ್, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಬಿ.ಶರಣಪ್ಪ ಹೊಸಾಲೆ, ಇನ್ವೆಸ್ಟ್ ದಾವಣಗೆರೆ ಸ್ಥಾಪಕ ನಾಗರಾಜ ರೆಡ್ಡಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.