ದಾವಣಗೆರೆ: 2025 ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-2 ಗೆ ನೋಂದಣಿ ಮಾಡಿಕೊಳ್ಳಲು ಮೇ.10 ಕೊನೆಯ ದಿನವಾಗಿರುತ್ತದೆ.
ಮೇ 26 ರಿಂದ ಪರೀಕ್ಷೆ
ಮೇ 26 ರಿಂದ ಜೂನ್ 2 ರವರೆಗೆ ಪರೀಕ್ಷೆ-2ನ್ನು ನಡೆಸಲಾಗುವುದು. ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೂಡಲೇ ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.



