ದಾವಣಗೆರೆ: ಕ್ರೀಡಾ ಶಾಲೆ, ನಿಲಯಗಳಿಗೆ ಜ ಆಯಾ ತಾಲ್ಲೂಕಿನಲ್ಲಿ ಆಯ್ಕೆ ಪ್ರಕ್ರಿಯೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಪ್ರಸಕ್ತ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡಲು ವಿವಿಧ ತಾಲ್ಲೂಕುಗಳಲ್ಲಿ ಆಯ್ಕೆ ಶಿಬಿರ ಆಯೋಜಿಸಲಾಗಿದೆ.

ಆಯ್ಕೆ ಎಲ್ಲಿ..? ಯಾವಾಗ..?

  • ಜನವರಿ.28 ರಂದು ಹರಿಹರ ತಾಲ್ಲೂಕು ಕ್ರೀಡಾಂಗಣ ಮೊ.ಸಂ: 91410 91590
  • ಜ.29 ರಂದು ಹೊನ್ನಾಳಿ ತಾಲ್ಲೂಕು ಕ್ರೀಡಾಂಗಣ ಮೊ.ಸಂ: 7892641492
  •  ಜಗಳೂರು ತಾಲ್ಲೂಕು ಕ್ರೀಡಾಂಗಣ ಮೊ.ಸಂ: 9972464313, ನ್ಯಾಮತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, ಮೊ.ಸಂ: 9480796263
  • ಜ.30 ರಂದು ಚನ್ನಗಿರಿ ತಾಲ್ಲೂಕು ಕ್ರೀಡಾಂಗಣ, ಮೊ.ಸಂ:9480796263
  • ಜ.31 ರಂದು ದಾವಣಗೆರೆ ಜಿಲ್ಲಾ ಕ್ರೀಡಾಂಗಣ ಮೊ.ಸಂ: 9141091590, 7892641492, 9480796263, 8971388143, 9980588415 ಸಂಖ್ಯೆಗೆ ಸಂಪರ್ಕಿಸಬೇಕು.

ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಜನ್ಮ ದಿನಾಂಕ ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು. ಹೆಚ್ಚಿನ ವಿವರಗಳಿಗೆ ಮೇಲಿನ ಮೊಬೈಲ್ ಸಂಖ್ಯೆಗಳಿಗೆ ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದೂ.ಸಂ: 08192-237480 ನ್ನು ಸಂಪರ್ಕಿಸಬೇಕೆಂದು ಇಲಾಖೆಯ ಸಹಾಯಕ ನಿರ್ದೇಶಕ ರೇಣುಕಾ ತಿಳಿಸಿದ್ದಾರೆ.

ದಾವಣಗೆರೆ: ತಪ್ಪು ಮಾಡಿದ್ರೆ ಕಾನೂನು ಕ್ರಮಕ್ಕೆ ಸಿದ್ಧ; ದಾದಾಗಿರಿಗೆ ಬಗ್ಗುವುದಿಲ್ಲ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ

ಅಂತರಿಕ ದೂರು ಸಮಿತಿ ರಚನೆ

ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟಲು ಸರ್ಕಾರಿ, ಸಾರ್ವಜನಿಕ, ಖಾಸಗಿ ವಲಯ ಕಾರ್ಖಾನೆಗಳು, ಗಾಮೆರ್ಂಟ್, ಸ್ವಯಂ ಸೇವಾ ಸಂಘ-ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಇಲಾಖೆ, ಇತ್ಯಾದಿ ಕಡೆ ಅಂತರಿಕ ದೂರು ನಿವಾರಣಾ ಸಮಿತಿಗಳನ್ನು ರಚನೆ ಮಾಡದೇ ಇರುವ ಸಂಸ್ಥೆಗಳಲ್ಲಿ ಆಂತರಿಕ ದೂರು ನಿವಾರಣೆ ಸಮಿತಿಗಳನ್ನು ರಚನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.

ಶಾಸಕ ಬಿ.ಪಿ. ಹರೀಶ್ ಇದೇ ರೀತಿ ಮಾತು ಮುಂದುವರಸಿದ್ರೆ ಕಲ್ಲಲ್ಲಿ ಹೊಡಿತೀವಿ; ಹರಿಹರ ಮಾಜಿ ಶಾಸಕ ರಾಮಪ್ಪ ಕಿಡಿ

ಸಮಿತಿ ರಚನೆ ಮಾಡದ ಸಂಸ್ಥೆಗಳ ಮೇಲೆ ಪಿಓಎಸ್‍ಹೆಚ್ 2013ರ ಕಾಯ್ದೆಯ ಸೆಕ್ಷನ್ 26 ರ ಪ್ರಕಾರ ಹಾಗೂ ಸಬ್‍ಸೆಕ್ಷನ್ 1 (4) ರ ಪ್ರಕಾರ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು, ಹಾಗೂ ಸಮಿತಿಗಳು ರಚನೆಯಾಗಿರುವ ,ರಚನೆಯಾಗದಿರುವ ಬಗ್ಗೆ ಮಾಹಿತಿಯು ಷಿಬಾಕ್ಸ್‍ಪೋರ್ಟಲ್(She-Box Portal) ನಲ್ಲಿ ಲಭ್ಯವಿರುತ್ತದೆ.

ಜಿಲ್ಲೆಯ ಮಾಹಿತಿಯನ್ನು ಪರಿಶೀಲಿಸಲಾಗಿದ್ದು ಜಿಲ್ಲೆಯಲ್ಲಿ ಇನ್ನೂ ಅಂತರಿಕ ದೂರು ಸಮಿತಿಯನ್ನು ರಚನೆ ಮಾಡದೇ ಇರುವ ಸಂಸ್ಥೆಗಳಲ್ಲಿ ತುರ್ತಾಗಿ ಸಮಿತಿ ರಚಿಸಿ ಮತ್ತು ಈಗಾಗಲೇ ರಚನೆ ಮಾಡಿರುವ ಸಮಿತಿಗಳನ್ನು ಸಂಸ್ಥೆಯ ಇತರೆ ಮಾಹಿತಿಯೊಂದಿಗೆ ಶೀಬಾಕ್ಸ್‍ಪೋರ್ಟಲ್‍ನಲ್ಲಿ ಇಂಡೀಕರಿಸಲು ಆದ್ಯತೆಯ ಮೇರೆಗೆ ಕ್ರಮವಹಿಸಬೇಕು.

ಈಗಾಗಲೇ ಅಸಂಘಟಿತ ವಲಯ, ಮನೆ ಕೆಲಸದ ಮಹಿಳೆಯರು 10ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಉಂಟಾಗುವ ಲೈಂಗಿಕ ಕಿರುಕುಳದ ಕುರಿತು ದೂರು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಳೀಯ ದೂರು ನಿರ್ವಹಣಾ ಸಮಿತಿಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *