ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆಯಲಾಗಿದೆ. ಉತ್ತರಪ್ರದೇಶ ಮೂಲದ ವ್ಯಕ್ತಿಯೊಬ್ಬ ಹನುಮಂತರಾಯ ಹೊಸ್ ಪೇಟ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ತಮ್ಮ ಪತ್ನಿಯಿಂದ ವಿಷಯ ತಿಳಿದ ಎಸ್‌ಪಿಯವರು ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿ, ಡಿಲೀಟ್ ಮಾಡಿಸಿದ್ದಾರೆ.
ನಕಲಿ ಖಾತೆ ಬಗ್ಗೆ ಟಿಟ್ಟರ್, ವಾಟ್ಸ್‌ಆ್ಯಪ್ ಗ್ರೂಪ್ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ನನ್ನ ಫೇಸ್‌ಬುಕ್ ಖಾತೆಯ ಮನವಿಗಳಿಗೆ ಯಾರೂ ಪ್ರತಿಕ್ರಿಯಿಸಬೇಡಿ. ನಕಲಿ ಖಾತೆ ಸೃಷ್ಟಿಸಿರುವ ವ್ಯಕ್ತಿಯ ನಂಬರ್ ಪತ್ತೆಯಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸೈಬರ್ ಅಪರಾಧ ಬಗ್ಗೆ ಸಾರ್ವನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ..



