ದಾವಣಗೆರೆ: ಏಕಾಏಕಿ ಸ್ಕೂಟಿಯೊಂದರ ಡಿಕ್ಕಿಯಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉರಗ ತಜ್ಞ, ಹಾವನ್ನು ಯಶಸ್ವಿಯಾಗಿ ಹಿಡಿದಿದ್ದು ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ.
ದಾವಣಗೆರೆ ನಗರದ ಅಣ್ಣನರದಲ್ಲಿ ಈ ಘಟನೆ ನಡೆದಿದೆ. ಆತಂಕದಿಂದ ಸ್ತಳೀಯರು ಸ್ನೇಕ್ ಬಸಣ್ಣ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಸ್ನೇಕ್ ಬಸಣ್ಣ, ಸ್ಕೂಟಿಯೊಳಗೆ ಸೇರಿಕೊಂಡಿದ್ದ ಹಾವನ್ನು ಹೊರ ತೆಗೆದಿದ್ದಾರೆ. ಸ್ಕೂಟಿ ಡಿಕ್ಕಿಯೊಳಗೆ ಹಾವು ಹೇಗೆ ಸೇರಿಕೊಳ್ಳತು ಎಂಬುದು ಸ್ಥಳೀಯರಿಗೆ ಅಚ್ಚರಿ ಉಂಟಾಗಿತ್ತು.



