ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶ್ರೀ ಶಿವಾಜಿ ಮಹಾರಾಜರು ಹಾಗೂ ಶ್ರೀ ಸವಿತ ಮಹರ್ಷಿ ಅವರ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈ ಮಹಾನ್ ಚೇತರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯಕ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಕ್ಷತ್ರೀಯ ಮರಾಠ ಸಮಾಜದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್, ಸವಿತ ಸಮಾಜದ ಜಿಲ್ಲಾಧ್ಯಕ್ಷರಾದ ಬಿ.ಬಾಲರಾಜ ಉಪಲ, ತಾಲ್ಲೂಕು ಅಧ್ಯಕ್ಷರಾದ ಎನ್.ರಂಗಸ್ವಾಮಿ, ಕಾರ್ಯದರ್ಶಿ ಜಿ.ಎಸ್.ಪರಶುರಾಮ, ಖಜಾಂಚಿ ಆರ್.ಕರಿಬಸಪ್ಪ, ಬಜೇಂತ್ರಿ ಸಂಘದ ಗೌರವಾಧ್ಯಕ್ಷರಾದ ಬಿ.ಎನ್.ಗೋವಿಂದರಾಜ್, ಅಧ್ಯಕ್ಷರಾದ ಎನ್.ಮಂಜುನಾಥ, ಸಮಾಜದ ಮುಖಂಡರಾದ ಬಿ.ಜಿ.ನಾಗರಾಜ್, ಪಿ.ಬಿ.ವೆಂಕಟಾಜಲಪತಿ, ಸಿ.ರಾಮಾಂಜನೇಯ, ಎನ್.ತಿಪ್ಪೇಶ್, ಆರ್.ಚಂದ್ರಶೇಖರ್, ಮಂಜುನಾಥ, ಸುನೀಲ್, ವೈ.ಮಲ್ಲೇಶ್, ಕೆ.ಎನ್.ಮಂಜೋಜಿರಾವ್ ಗಾಯಕ್‍ವಾಡ್, ಸೋಮಶೇಖರ್ ಪವಾರ್ ಮತ್ತಿತರು ಹಾಜರಿದ್ದರು.



