ಶಿವಮೊಗ್ಗ: ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ (ಶಿಮೂಲ್) ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಇಂದು(ಆ.26) ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ಪಾಲಾಗಿದೆ.
ಶಿಮೂಲ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಅಯ್ಕೆಯಾಗಿದೆ. ಅಧ್ಯಕ್ಷರಾಗಿ ವಿದ್ಯಾಧರ ಹಾಗೂ ಉಪಾಧ್ಯಕ್ಷರಾಗಿ ಚೇತನ್ ಎಸ್ ನಾಡಿಗರ್ ಆಯ್ಕೆಯಾಗಿದ್ದಾರೆ. ಹೊಸನಗರದಿಂದ ಶಿಮೂಲ್ ನಿರ್ದೇಶಕರಾಗಿ ವಿದ್ಯಾಧರ್ ಮತ್ತು ದಾವಣಗೆರೆ ವಿಭಾಗದಿಂದ ಚೇತನ್ ಎಸ್ ನಾಡಿಗರ್ ಆಯ್ಕೆಯಾಗಿದ್ದರು.
ಶಿಮೂಲ್ ನಲ್ಲಿ 14 ನಿರ್ದೇಶಕ ಸ್ಥಾನಗಳಿದ್ದು, 8 ಕಾಂಗ್ರೆಸ್ ಬೆಂಬಲಿತ, 4 ಬಿಜೆಪಿ 1 ಜೆಡಿಎಸ್ 1 ಪಕ್ಷೇತರರು ಆಯ್ಕೆಯಾಗಿದ್ದಾರೆ.



