ದಾವಣಗೆರೆ: ತೀವ್ರ ಬರದ ನಡುವೆಯೇ ರೈತರಿಗೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ(ಶಿಮುಲ್) ಶಾಕ್ ನೀಡಿದೆ. ನಷ್ಟದ ನೆಪ ಹೇಳಿ ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಏಕಾಏಕಿ ಪ್ರತಿ ಲೀಟರ್ ಗೆ 2 ರೂಪಾಯಿ ಕಡಿತಗೊಳಿಸಿ ಆದೇಶ ಮಾಡಲಾಗಿದೆ.
ಬರಗಾಲದ ಸಂದರ್ಭದಲ್ಲಿ ಹಾಲು ಖರೀದಿ ದರ ಇಳಿಕೆ ಮಾಡಿರುವುದು ಹಾಲು ಉತ್ಪಾದಕರಿಗೆ ಹೊರೆಯಾಗಿ ಪರಿಣಮಿಸಿದೆ. ಹಾಲಿನ ಉತ್ಪಾದನೆಗೂ ಮಾರಾಟಕ್ಕೂ ತಾಳೆಯಾಗದೆ ಒಕ್ಕೂಟ ನಷ್ಟದ ಹಾದಿಯಲ್ಲಿದೆ. ಹೀಗಾಗಿ ರೈತರಿಗೆ ನೀಡುವ ಹಾಲಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಇಳಿಕೆ ಮಾಡಲಾಗಿದೆ. ಡಿಸೆಂಬರ್ 21 ರಿಂದ ಈ ಆದೇಶ ಜಾರಿಗೆ ಬಂದಿದೆ.