ದಾವಣಗೆರೆ: ಈ ಬಾರಿಯೂ ಸಂಸದ ಜಿ.ಎಂ.ಸಿದ್ದೇಶ್ವರ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ. ಸಿದ್ದೇಶ್ವರ ಸೋಲುವುದನ್ನು ನಾನು ನೋಡಬೇಕು ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಜಿ ಎಂ ಸಿದ್ದೇಶ್ವರ್ ಈ ಬಾರಿ ಸ್ಪರ್ಧೆ ಮಾಡಲಿ. ಮೊದಲು ಲೋಕಸಭೆ ಚುನಾವಣೆಗೆ ಟಿಕೆಟ್ ತಗೊಂಡು ಬಂದು ನಿಲ್ಲುವುದಕ್ಕೆ ಹೇಳಿ. ಕಾಂಗ್ರೆಸ್ ನಿಂದ ಸ್ಪರ್ಧೆಗೆ ಬಹಳ ಜನರಿದ್ದಾರೆ. ಯಾರು ನಿಲ್ಲಲ್ಲ ಅಂದ್ರೆ ನಾನೇ ನಿಲ್ಲುತ್ತೇನೆ. ಜಿ.ಎಂ ಸಿದ್ದೇಶ್ವರ್ ಸೋಲುವುದನ್ನು ನಾನು ನೋಡಬೇಕು ಎಂದರು. ನಾನೇ ಸಿದ್ದೇಶ್ವರಗೆ ಚುನಾವಣೆಗೆ ಫಂಡ್ ಬೇಕಾದರೂ ಮಾಡುತ್ತೇನೆ. ಬೊಮ್ಮಾಯಿ ಹೇಗೆ ಸಂಬಂಧನೋ ಅವನು ಕೂಡ ನನ್ನ ಅಳಿಯ ಎಂದು ತಿಳಿಸಿದರು.