ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಾಂಕೇತಿಕವಾಗಿ ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಅವರಿಗೆ ಸಲ್ಲಿಸಿದರು. ಈ ವೇಳೆ ತಮ್ಮ ಬಳಿ 257.83 ಕೋಟಿ ಚರಾಸ್ತಿ, 35 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 292.83 ಕೋಟಿ ಆಸ್ತಿ ಇದೆ ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
17.74 ಕೋಟಿ ರೂ. ಸಾಲ ಇದ್ದು, 8.01 ಲಕ್ಷ ರೂ ಕೈಯಲ್ಲಿರುವ ನಗದು ಇದೆ. 63.96 ಕೋಟಿ ಬ್ಯಾಂಕ್ ಠೇವಣಿ ಇದ್ದು, ಷೇರುಗಳಲ್ಲಿ 85.32 ಕೋಟಿ ಹೂಡಿಕೆ ಮಾಡಲಾಗಿದೆ. ಒಟ್ಟು 104 ಕೋಟಿ ರೂ ಸಾಲ ಕೊಡಲಾಗಿದೆ. 2.25 ಕೋಟಿ ಆಭರಣ ಹಾಗು ವಸ್ತುಗಳಿವೆ. 73.26 ಲಕ್ಷದ ವಾಹನಗಳಿವೆ. 35 ಕೋಟಿ ಬೆಲೆಬಾಳುವ ಕೃಷಿಯೇತರ ಭೂಮಿ, 25 ಲಕ್ಷ ಮೌಲ್ಯದ 1100 ಚದರಡಿ ಜಾಗ ಹಾಗು ಮನೆ ಸೇರಿದಂತೆ 257.83 ಕೋಟಿ ಚರಾಸ್ತಿ ಮತ್ತು 35 ಕೋಟಿ ಸ್ಥಿರಾಸ್ತಿ ಇದೆ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



