ದಾವಣಗೆರೆ: ಮಹಿಳೆ ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂದ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಖಂಡಿಸಿ, ಬಿಜೆಪಿ ಜಿಲ್ಲಾ ಘಟಕದಿಂದ ಏ. 3 ಅಥವಾ ಏ.4ರಿಂದ ಜಿಲ್ಲಾದ್ಯಂತ ಮಹಿಳೆ ಅಡುಗೆ ಮಾಡಲೂ ಸಿದ್ಧ. ಜನಸೇವೆಗೂ ಬದ್ಧ ಎಂಬ ಘೋಷ ವಾಕ್ಯದೊಂದಿಗೆ ಆಂದೋಲನ ನಡೆಸಲಾಗುವುದು ತೀರ್ಮಾನಿಸಲಾಗೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಶೇಖರ್, ಬಿಜೆಪಿಯ ಮಹಿಳಾ ಘಟದಿಂದ ಈ ಆಂದೋಲನ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಡುಗೆ ಮಾಡಿ ಆದೋಲ ಮಾಡಲಾಗುವುದು. ವೈದ್ಯರು, ವಕೀಲರು, ಪೌರಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿ ಮಾಡುತ್ತಿರುವ ಮಹಿಳೆಯರು ಆಂದೋಲನದಲ್ಲಿ ಭಾಗಿಯಾಗುವರು ಎಂದರು.
ಈಗ ಜಿಲ್ಲಾ ವ್ಯಾಪ್ತಿಯಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು, ಮುಂದೆ ಇದು ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ಇದೆ. ಮಹಿಳೆಯರು ಅಡುಗೆ ಮನೆಗೆ ಸೀಮಿತವಲ್ಲ ಎಂಬ ಸಂದೇಶ ಸಾರುವುದು ಆಂದೋಲನ ಮುಖ್ಯ ಉದ್ದೇಶ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ಮಾವ, ಶಾಸಕ ಶಾಮನೂರು ಶಿವಶಂಕರಪ್ಪ , ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಲಾಯನ ಮಾಡುವುದು ಸರಿಯಲ್ಲ ಎಂದರು.



