ದಾವಣಗೆರೆ: ಶ್ರೀ ಸತ್ಯ ಸಾಯಿ ಬಾಬಾ ಅವರ 97 ನೇ ಜಯಂತಿ ಅಂಗವಾಗಿ ಮೇ 11 ರಂದು ಸತ್ಯಸಾಯಿ ಸೇವಾ ಸಂಸ್ಥೆಗಳ ವತಿಯಿಂದ ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಶ್ರೀ ಸತ್ಯಸಾಯಿ ಸೇವಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೊಂದು ಉಚಿತ ಉಪನಯನ ಸಂಸ್ಕಾರ ಸೇವೆ ಆಗಿರುತ್ತದೆ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ವೇದ ಪೋಷಣ ಹಾಗೂ ವೇದೋದ್ಧರಣದ ಆಶಯದಂತೆ ಕಾರ್ಯಕ್ರಮ ನಡೆಯಲಿದೆ.
ನಿಮಗೆ ತಿಳಿದ ಅಂತಹವರು, ಯಾರಾದರೂ ವಟು (ಮಗು) ಇದ್ದಲ್ಲಿ ಅವರ ಹೆಸರು ನೋಂದಾಯಿಸಲು ವಿನಂತಿಸಲಾಗಿದೆ. ವಟುವಿಗೆ ಹಾಗೂ ವಟುವಿನ ತಂದೆ ತಾಯಿಗಳಿಗೆ ಹಾಗೂ ಉಪನಯನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಹಾಗೂ ಪೂಜಾಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ಇದಲ್ಲದೇ ವಟು ಮತ್ತು ತಂದೆ-ತಾಯಿಗೆ ಮಡಿ ವಸ್ತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷರು ಪ್ರಶಾಂತ್ ಕುಮಾರ್ ಎಸ್. ಕುರ್ಡೇಕರ್ 9591340301, ಆಧ್ಯಾತ್ಮಿಕ ಸಂಯೋಜಕ ಕಿರಣ ಎಸ್. ರಾಯ್ಕರ್ 8892692927 ಹಾಗೂ ವೇದ ಸಂಯೋಜಕ ಗಿರೀಶ್ ಕೆ . ವೇರ್ಣೇಕರ್ 9980068688 ಸಂಪರ್ಕಿಸಿ.