ದಾವಣಗೆರೆ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯ ತುಂಗಾಭದ್ರಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೂ.09 ರಂದು ಆಯೋಜಿಸಲಾಗಿದೆ. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮಜಲು ವಾಹನ ರಹದಾರಿಗಳಿಗೆ ಸಂಬಂಧಿಸಿದ ರಹದಾರಿದಾರರು ಸಲ್ಲಿಸಿರುವ ಅರ್ಜಿಗಳನ್ನು ಹಾಗೂ ಇನ್ನಿತರ ರಹದಾರಿಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಮಂಡಿಸಲಾಗುತ್ತದೆ.
ಆದ್ದರಿಂದ ರಹದಾರಿಗಳಿಗೆ ಸಂಬಂಧಪಟ್ಟ ಅಗತ್ಯ ದಾಖಲಾತಿಗಳೊಂದಿಗೆ ರಹದಾರಿದಾರರು ಹಾಜರಾಗಬೇಕಾಗಿದೆ. ಒಂದು ವೇಳೆ ಸಭೆಗೆ ಗೈರು ಹಾಜರಾದಲ್ಲಿ ರಹದಾರಿಗೆ ಸಂಬಂಧಿಸಿದ ವಿಷಯವನ್ನು ಆಧರಿಸಿ ಸೂಕ್ತ ನಿರ್ಧಾರವನ್ನು ಅರ್ಜಿದಾರರ ಅನುಪಸ್ಥಿತಿಯಲ್ಲಿಯೇ ಕೈಗೊಳ್ಳಲಾಗುವುದು. ಈಗಾಗಲೇ ನೋಟೀಸ್ ಬರೆದು ಅಂಚೆ ಮೂಲಕ ರವಾನಿಸಲಾಗಿರುತ್ತದೆ. ನೋಟೀಸ್ ತಲುಪದ ತಹದಾರಿದಾರರು ಪ್ರಸ್ತುತ ಪತ್ರಿಕಾ ಪ್ರಕಟಣೆಯನ್ನೇ ನೋಟೀಸ್ ಎಂದು ಪರಿಗಣಿಸಿ ಸಭೆಗೆ ಹಾಜರಾಗುವಂತೆ ಶ್ರೀಧರ್ ಕೆ.ಮಲ್ಲಾಡ ಕಾರ್ಯದರ್ಶಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ದಾವಣಗೆರೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



