ಡಿವಿಜಿ ಸುದ್ದಿ, ದಾವಣಗೆರೆ: ಸಾರಿಗೆ ಇಲಾಖೆಯ ಸೇವೆಗಳಾದ ಕಲಿಕಾ ಅನುಜ್ಞಾ ಪತ್ರ(ಎಲ್.ಎಲ್), ಹೊಸ ಚಾಲನಾ ಅನುಜ್ಞಾ ಪತ್ರ(ಪಿಡಿಎಲ್), ಹೆಚ್ಚುವರಿ ಚಾಲನಾ ಅನುಜ್ಞಾನ ಪತ್ರ(ಎಇಡಿಎಲ್), ಚಾಲನಾ ಅನುಜ್ಞಾ ಪತ್ರದ ನವೀಕರಣ(ಆರ್‍ಡಿಎಲ್) ತ್ತು ನವೀಕರಣ ಮತ್ತು ಪುನಃ ಪರೀಕ್ಷೆ ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಲಾಟ್ ಬುಕ್ ಮಾಡುವುದು ಕಡ್ಡಾಯವಾಗಿರುತ್ತದೆ.
ಅ.12 ರಿಂದ ಸ್ಲಾಟ್‍ಗಳು ಸಾರಥಿ-04 ತಂತ್ರಾಂಶದ ಪರಿವಾಹನ್(Parivahan) ವೆಬ್‍ಸೈಟ್‍ನಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 10 ವರೆಗೆ ದೊರೆಯಲಿದೆ. ಸ್ಲಾಟ್ ಬುಕ್ಕಿಂಗ್ ಮಾಡಲು ಮತ್ತು ಈ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ಆನ್‍ಲೈನ್‍ನಲ್ಲಿ(ನೆಟ್‍ಬ್ಯಾಂಕಿಂಗ್/ಡಿಬಿಟ್/ಕ್ರೆಡಿಟ್ ಕಾರ್ಡ್) ಮುಖಾಂತರ ಅಥವಾ ಕಚೇರಿಯ ಖಜಾನೆಯಲ್ಲಿ ಪಾವತಿ ಮಾಡಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಜಾಲತಾಣ Parivahan.gov.in-sarathi-Driving Licence related service ಸಂಪರ್ಕಿಸಿ, ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆಯಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.