ದಾವಣಗೆರೆ: ಏಕಾಏಕಿ ದಾವಣಗೆರೆ ಜಿಲ್ಲಾಸ್ಪತ್ರೆಯ ಮೇಲ್ಛಾವಣಿ ಕುಸಿದಿದೆ. ಇದರಿಂದ ಆತಂಕಗೊಂಡ ರೋಗಿಗಳು ವಾರ್ಡ್ ನಿಂದ ಹೊರ ಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಿಗಟೇರಿ ಜಿಲ್ಲಾಸ್ಪತ್ರೆಯ 71-72ನೇ ವಾರ್ಡ್ ಬೆಡ್ ಮೇಲೆ ಚಿಕಿತ್ಸೆ ಪಡೆದು ರೋಗಿಗಳು ಮಲಗಿದ್ದರು. ಏಕಾಏಕಿ ಮೇಲ್ವಾವಣಿ ಕುಸಿದು ಬಿದ್ದಿದೆ. ಇದರಿಂದ ಆತಂಕಗೊಂಡ ರೋಗಿಗಳು ಕೂಡಲೇ ಹೊರ ಬಂದಿದ್ದು, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಮೇಲ್ಚಾವಣಿ ಬೀಳುತ್ತಿದ್ದಂತೆ ವಾರ್ಡ್‌ನಲ್ಲಿದ್ದ ರೋಗಿಗಳು ಭಯಗೊಂಡಿದ್ದು, ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯ ವಹಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯ ದಿಂದ ಗುಣಮುಖರಾಗಲು ಆಸ್ಪತ್ರೆಗೆ ಬರುತ್ತಾರೆ. ಆದ್ರೆ, ಮಲಗಿದ್ದ ರೋಗಿ ಮೆಳೆ ಏಕಾಏಕಿ ಆಸ್ಪತ್ರೆ ಮೇಲ್ಛಾವಣಿ ಕುಸಿದ್ರೆ ಹೇಗೆ..? ಜಿಲ್ಲಾಸ್ಪತ್ರೆಯ ಈ ಎರಡು ವಾರ್ಡ್ ಮಾತ್ರವಲ್ಲ, ಬೇರೆ ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ಕೂಡಲೇ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



