ದಾವಣಗೆರೆ: ಸರ್ಕಾರವು ಇನಾಂ ಜಮೀನು ಮರು ಮಂಜೂರಾತಿ ಅವಧಿಯನ್ನು ವಿಸ್ತರಿಸಿದೆ. ದಿನಾಂಕ 18.01.2022 ರನ್ವಯ ಕರ್ನಾಟಕ ಕೆಲವು ಇನಾಮು ಜಮೀನುಗಳ ಬಾಕಿ ಇರುವ ಪ್ರಕರಣಗಳನ್ನು ಮರು ಮಂಜೂರು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಜ.17 ರಿಂದ ಒಂದು ವರ್ಷದವರೆಗೆ ಅವಧಿ ವಿಸ್ತರಿಸಿ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.
ಈ ಹಿಂದಿನ ಅವಧಿಯಲ್ಲಿ ಕಾರಣಾಂತರಗಳಿಂದ ಅರ್ಜಿ ಸಲ್ಲಿಸಿ ಮರು ಮಂಜೂರಾತಿ ಆದೇಶ ಪಡೆಯಲು ವಿಫಲರಾದ ಭೂ ಮಾಲೀಕರು, ಸರ್ಕಾರವು ವಿಸ್ತರಿಸಿದ ಅವಧಿಯಲ್ಲಿ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಇನಾಂ ಜಮೀನುಗಳ ರೀ-ಗ್ರಾಂಟ್‍ಗಾಗಿ ನಮೂನೆ-1ಎ ರಲ್ಲಿ ಅರ್ಜಿ ಸಲ್ಲಿಸಿ ಮರು ಮಂಜೂರಾತಿ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಬಸವನಗೌಡ ಕೊಟ್ಟೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



