ದಾವಣಗೆರೆ: ನಾನು ನಿಯತ್ತಿನ ನಾಯಿ, ನಿನ್ನಂತೆ ನಿಯತ್ತಿಲ್ಲದ ನಾಯಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗೆ ತಿರುಗೇಟು ನೀಡಿದರು.
ನಾಯಿ ಅಂತ ಕರೆದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಹೌದು ನಾನು ನಿಯತ್ತಿನ ನಾಯಿ. ಆದ್ರೆ ನಿನ್ನಂತೆ (ವಾಟಾಳ್ )ನಿಯತ್ತಿಲ್ಲದ ನಾಯಿ ಅಲ್ಲ. ವಾಟಾಳ್ ನಾಗರಾಜ್ ಬ್ಲ್ಯಾಕ್ ಮೇಲ್ ವ್ಯಕ್ತಿ. ಶಾಸಕರಾಗಿದ್ದಾಗ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವರ್ತಕರಿಂದ ಸುಲಿಗೆ ಮಾಡಿದ್ದಾರೆ. ಕೆಲವರು ಹೊಟ್ಟೆಪಾಡಿಗೆ ಇನ್ನೊಬ್ಬರನ್ನ ಬೇದರಿಸಿ ಹಾಗೂ ಸುಲಿಗೆ ಮಾಡಿ ಬದುಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಸಂಘಟನೆ ಗಳಿಗೆ ನಿಯತ್ತು ಇದ್ರೆ, ಸ್ವಂತ ಖರ್ಚು ಮಾಡಿ ಕನ್ನಡಾಂಭೆ ಸೇವೆ ಮಾಡಲಿ. ರಾಜ್ಯ ಬಂದ್ ಗೆ ಸಾರ್ವಜನಿಕರು ಸ್ಪಂದಿಸಲ್ಲ. ಬಹುತೇಕರು ಬಂದ್ ಗೆ ಬೆಂಬಲ ಸೂಚಿಸಿಲ್ಲ ಎಂದರು. ಸಿ. ಪಿ. ಯೋಗೇಶ್ವರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಮಾತಾಡಿದ್ರೆ ನನ್ನ ಘನತೆಗೆ ದಕ್ಕೆ ಆಗುತ್ತದೆ. ಒಂದೇ ವಿಚಾರವನ್ನ ಪದೇ ಪದೇ ಹೇಳಬಾರದು. ಎಲ್ಲಿ ಮಾತಾಡಬೇಕು ಅಲ್ಲಿ ಮಾತಾಡುತ್ತೇನೆ. ಈಗಾಗಲೇ ನನ್ನ ತಂದೆ ಸಮಾನರಾದ ಮುಖ್ಯಮಂತ್ರಿ ಗಳು, ವರಿಷ್ಠರ ಬಳಿ ಮನವಿ ಮಾಡಿದ್ದೇನೆ. ನನ್ನನ್ನು ಸಚಿವರನ್ನ ಮಾಡುವುದು ಪಕ್ಷಕ್ಕೆ ಬಿಟ್ಟಿದ್ದು, ಸದ್ಯ ಗ್ರಾಪಂ ಚುನಾವಣೆ ಬಗ್ಗೆ ಗಮನ ಹರಿಸುತ್ತೇನೆ. ನಂತರ ಸದನಕ್ಕೆ ಹಾಜರಾಗುತ್ತೇನೆ ಎಂದರು.



