ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಶಾಖೆಯಿಂದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಖ್ಯಾತಗಾಗಿ ಇಎನ್ ಟಿ ತಜ್ಞ ಡಾ. ಎ. ಎಂ. ಶಿವಕುಮಾರ್ ಅವರು ಇಂದು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಿ. ಎಸ್. ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಶೆಟ್ಟಿ, ಕಾರ್ಯದರ್ಶಿಯಾದ ಡಿ. ಎಸ್. ಸಾಗರ್ ಅವರಿಗೆ ಒಂದು ಲಕ್ಷ ರೂ ಚೆಕ್ ನ್ನು ಹಸ್ತಾಂತರಿಸಿದರು. ಕೋವಿಡ್ ಚಿಕಿತ್ಸೆಗೆ ದೇಶದೆಲ್ಲೆಡೆ ಆಕ್ಸಿಜನ್ ಕೊರೆತೆ ಉಂಟಾಗಿದ್ದ ಹಿನ್ನೆಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಸೊಸೈಟಿ ಆವರಣದಲ್ಲಿ ದಾನಿಗಳ ನೆರವಿನಿಂದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಿಸಲು ಮುಂದಾಗಿದ್ದು ದಾನಿಗಳು ಈ ಕೆಳಕಂಡ ಬ್ಯಾಂಕ್ ವಿವರಗಳಲ್ಲಿ ಹಣ ಸಂದಾಯ ಮಾಡಬಹುದೆಂದು ಸಂಸ್ಥೆಯ ಪಿ.ಆರ್.ಓ. ಶ್ರೀಕಾಂತ ಬಗರೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬ್ಯಾಂಕ್ ವಿಳಾಸ: INDIAN RED CROSS SOCIETY, A/c No : 64026238520, IFSC code : SBIN0040947, A/c type : SB account, Bank name : State Bank of India , Branch : Sankarvihar badavane, Davanagere, Phone – Google pay No : 7353301990.
.



