ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಶಾಖೆಗೆ ಇಂದು ಕನ್ನಡ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಮತ್ತು ಅವರ ಪತ್ನಿ ಮೀರಾ ಭೇಟಿ ನೀಡಿದರು.
ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಸಾರ್ವಜನಿಕರಿಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿ, ಧನ ಸಹಾಯ ಮಾಡಿದರು. ಈ ವೇಳೆ ರೆಡ್ ಕ್ರಾಸ್ ಸಂಸ್ಥೆಯಿಂದ ಅರುಣ್ ಸಾಗರ ದಂಪತಿಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ:ಎ. ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಸಲಹೆಗಾರ ಆರ್.ಟಿ. ಅರುಣಕುಮಾರ್, ಉಪಾಧ್ಯಕ್ಷ ಡಿ. ಎಸ್. ಸಿದ್ದಣ್ಣ, ಖಜಾಂಚಿ ಅನಿಲ್ ಬಾರಂಗಳ, ಸಂಸ್ಥೆ ನಿರ್ದೇಶಕ ಇನಾಯತ್ಉಲ್ಲಾ, ಆನಂದಜ್ಯೋತಿ, ನರೇಂದ್ರಪ್ರಕಾಶ, ವಸಂತರಾಜು, ಧನಂಜಯ ಮೂರ್ತಿ, ರವಿಕುಮಾರ್, ಡಿ.ಎನ್. ಶಿವಾನಂದ, ಮೋಹನ್ ಕುಮಾರ್, ನಾಗರಾಜ್. ಕೆ.ಕೆ, ಶ್ರೀಕಾಂತ ಬಗರೆ, ಶಿವಕುಮಾರ್ ಇದ್ದರು.