ಡಿವಿಜಿ ಸುದ್ದಿ, ದಾವಣಗೆರೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ನಗರದ ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಗ 10 ಲಕ್ಷ ಹಾಗೂ ತಮಿಳುನಾಡಿನ ತೂತ್ತುಕುಡಿಯಲ್ಲಿರುವ ತಿರುವೈಕುಂಠಂ ಕೋ ಆಪರೇಟಿವ್ ಬ್ಯಾಂಕ್ ಗೆ 5 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬ್ಯಾಂಕ್ ಗಳಿಗೆ ಇರುವ ನಿಯಮಾವಳಿ ಅನುಸರಿಸದ ಕಾರಣಕ್ಕೆ ದಾವಣಗೆರೆಯ ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಗೆ ಹತ್ತು ಲಕ್ಷ ರುಪಾಯಿ ದಂಡ ಹಾಕಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಈ ದಂಡವನ್ನು ಹಾಕಿರುವುದು ನಿಯಮಾವಳಿಗೆ ಬದ್ಧವಿಲ್ಲದೆ ಕಾರಣಕ್ಕೆ ಹೊರತು ಬ್ಯಾಂಕ್ ಗ್ರಾಹಕರ ಜತೆಗಿನ ಯಾವುದೇ ವ್ಯವಹಾರ ಅಥವಾ ಒಪ್ಪಂದದಲ್ಲಿನ ಸಮಸ್ಯೆ ಕಾರಣಕ್ಕೆ ಅಲ್ಲ ಎಂದು ಆರ್ ಬಿಐ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.



