Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆ..?

rain 233

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆ..?

ದಾವಣಗೆರೆ: ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ವಾಡಿಕೆಗಿಂತಲ್ಲೂ ಹೆಚ್ಚು ಮಳೆಯಾಗಿದೆ. ವಾಡಿಕೆಯಂತೆ 2.7 ಮಿಮೀ ಮಳೆಯಾಗಬೇಕಿತ್ತು. ಆದರೆ, 12.0 ಮಿಮೀ ವಾಸ್ತವ ಮಳೆಯಾಗಿದೆ.ಜೋರು ಮಳೆಯಿಂದ ಜಿಲ್ಲೆಯಲ್ಲಿ 2 ಮನೆಗಳು ಹಾನಿಗೀಡಾಗಿದ್ದು, ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಕಳೆದ 3 ದಿನಗಳಿಂದ ಜಿಲ್ಲೆಯ ಜನತೆ ಮಲೆನಾಡಿನ ಮಳೆ ಅನುಭವ ಕಾಣುವಂತಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ..?

ಚನ್ನಗಿರಿಯಲ್ಲಿ 4.1 ಮಿಮೀ ಮಳೆಗೆ 17.8 ಮಿಮೀ ಮಳೆಯಾಗಿದ್ರೆ, ಹೊನ್ನಾಳಿಯಲ್ಲಿ 3.2 ಮಿಮೀ ವಾಡಿಕೆ ಮಳೆಗೆ 16.7 ಮಿಮೀ ಮಳೆಯಾಗಿದೆ.ದಾವಣಗೆರೆಯಲ್ಲಿ 2.1 ಮಿಮೀ ವಾಡಿಕೆ ಮಳೆಗೆ 14.4 ಮಿಮೀ ಮಳೆಯಾಗಿದೆ. ಹರಿಹರದಲ್ಲಿ 2.1 ಮಿಮೀ ವಾಡಿಕೆ ಮಳೆಗೆ 13.7 ಮಿಮೀ, ಜಗಳೂರಿನಲ್ಲಿ 1.3 ಮಿಮೀ ವಾಡಿಕೆ ಮಳೆಗೆ 3.1 ಮಿಮೀ, ನ್ಯಾಮತಿಯಲ್ಲಿ 3.6 ಮಿಮೀ ವಾಡಿಕೆ ಮಳೆಗೆ 1.5 ಮಿಮೀ ಮಳೆಯಾಗಿದೆ.

ಹರಿಹರ ತಾಲೂಕಿನಲ್ಲಿ ಕೊಮಾರನಹಳ್ಳಿಯಲ್ಲಿ ಮಳೆಯಿಂದಾಗಿ 4 ಜಾನುವಾರುಗಳು ಮೃತಪಟ್ಟಿವೆ. ದಾವಣಗೆರೆ ತಾಲೂಕಿನಲ್ಲಿ 1 ಮನೆ ಭಾಗಶಃ, ಚನ್ನಗಿರಿ ತಾಲೂಕಿನಲ್ಲಿ 1 ಮನೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದೆ. ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ಪರಿಶೀಲನೆ ಕಾರ್ಯ ಮುಂದುವರಿದಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top