ದಾವಣಗೆರೆ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸುತ್ತಿದ್ದು,ಭಾರೀ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ. ಸತತ ಮಳೆಯಿಂದ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬೆಳ್ಳಂಬೆಳಗ್ಗೆ ಮಳೆಯಿಂದ ಶಾಲಾ ಮಕ್ಕಳು, ಸಾರ್ವಜನಿಜರು, ಅಗತ್ಯ ವಸ್ತು ಖರೀದಿಸುವರು ಪರದಾಟ ನಡೆದಿದರು.
ಇಂದು ಬೆಳಗ್ಗೆ 6 ಗಂಟೆಯಿಂದ ಶುರುವಾದ ಮಳೆ, ಸತತ ಎರಡ್ಮೂರು ತಾಸು ಸುರಿದಿದೆ. ಕಳೆದ 15 ದಿನದಿಂದ ಮಳೆಯಾಗದಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ರೈತರಿಗೆ ಈ ಮಳೆ ಖುಷಿ ನೀಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಮೆಕ್ಕೆಜೋಳ ಬಿತ್ತನೆ ಮಾಡಿ ಮಳೆಯಾಗಿ ರೈತರು ಕಾಯುತ್ತಿದ್ದರು. ಬೆಳೆಗೆ ಮಳೆ ಇಲ್ಲದೆ ಒಣಗುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ಉತ್ತಮ ಮಳೆಯಾಗಿದ್ದರಿಂದ ಸಹಜವಾಗಿ ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸಾಕಷ್ಟು ಅಬ್ಬರ ಮಾಡಿತ್ತು. ನಂತರ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬಿದ್ದಿರಲಿಲ್ಲ. ಭೂಮಿಗೆ ಬಿದ್ದ ಅಲ್ಪಸ್ವಲ್ಪ ಮಳೆಯಿಂದಲೇ ರೈತರು ಮೆಕ್ಕೆಜೋಳ ಬಿತ್ತಿದ್ದರು. ಆದರೆ, ಕಳೆದು 15 ದಿನದಿಂದ ನಿರೀಕ್ಷಿತ ಮಳೆಯಾಗದಿದ್ದರಿಂದ ರೈತರರಲ್ಲಿ ಆತಂಕ ಮೂಡಿತ್ತು. ಇನ್ನು ಭತ್ತ ನಾಟಿಗೆ ಭದ್ರಾ ಡ್ಯಾಂ ಇನ್ನು ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಈಗ ಎಲ್ಲ ಕಡೆ ಉತ್ತಮ ಮಳೆಯಾಗುತ್ತಿದ್ದತಿದ್ದರಿಂದ ಭತ್ತ ಬೆಳೆ ರೈತರರಲ್ಲಿಯೂ ಸಂತಸ ಮೂಡಿದೆ.



