ದಾವಣಗೆರೆ: ದಾವಣಗೆರೆ ನಗರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಬೇಸಿಗೆ ಬಿಸಿಲಿನಿಂದ ಕಾವಲಿಯಂತಾಗಿದ್ದ ಭೂಮಿ ತಂಪಾಗಿದೆ.
ನಗರದ ಜಯದೇವ ಸರ್ಕಲ್, ಪಿಬಿ ರಸ್ತೆ, ಹೊಂಡದ ಸರ್ಕಲ್, ಕೊಂಡಜ್ಜಿ ರಸ್ತೆ, ಹದಡಿ ರಸ್ತೆ, ಶಾಮನೂರು ರಸ್ತೆ ಸೇರಿದಂತೆ ನಗರದ ವಿವಿಧೆಡೆ ಮಳೆಯಾಗಿದೆ. ಸಂಜೆಯ ಮಳೆಯಾಗಿದ್ದರಿಂದ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ. ಇನ್ನು ಕೆಲಸ ಮುಗಿಸಿ ಮನೆಗೆ ಹೊರಡಬೇಕಿದ್ದ ಸಾರ್ವಜನಿಕರು ಪರದಾಟ ನಡೆಸಿದರು.