ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನದಿಂದ ಹಿಂಗಾರು ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಭತ್ತ ಬೆಳೆಗೆ ಹಾನಿಯಾಗಿದೆ. ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಅರ್ಧ ಬೆಳೆ ಹಾನಿಯಾಗಿತ್ತು. ಉಳಿದ ಅರ್ಧ ಭಾಗ ಭದ್ರಾ ನಾಲೆಯ ಆಫ್ ಅಂಡ್ ಆನ್ ಪದ್ಧತಿಯಲ್ಲಿ ಕಷ್ಟಪಟ್ಟು ಬೆಳೆದ ಭತ್ತಕ್ಕೆ ಅಕಾಲಿಕ ಮಳೆ ಕಾಡುತ್ತಿದೆ. ದಾವಣಗೆರೆ ತಾಲೂಕು ಕಡ್ಲೇಬಾಳು, ಕಕ್ಕರಗೊಳ್ಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕಾಲಿಕ ಮಳೆ, ಗಾಳಿಯಿಂದಾಗಿ ಭತ್ತ ಬೆಳೆ ಅಪಾರ ಪ್ರಮಾಣದಲ್ಲಿ ನೆಲಕಚ್ಚಿದೆ. ಇಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾದ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಲಾಯಿತು. ಕೂಡಲೇ ರಾಜ್ಯ ಸರ್ಕಾರ, ರೈತರ ಭತ್ತದ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷಲೋಕಿಕೆರೆ ನಾಗರಾಜ್ , ರಾಜ್ಯ ರೈತ ಮೋರ್ಚಾದ ಕಾರ್ಯಕರಿಣಿ ಸದಸ್ಯ ಕೊಳೆನಹಳ್ಳಿ ಸತೀಶ್ , ಬಿಜೆಪಿ ಜಿಲ್ಲಾ ಖಜಾಂಜಿಗ ಬಾತಿ ವೀರೇಶ್ , ಉತ್ತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ರೇವಣಸಿದ್ದಪ್ಪ, ರೈತ ಮುಖಂಡ ಕಡ್ಲೇಬಾಳು ಧನಂಜಯ್ , ಕಕ್ಕರಗೊಳ್ಳ ಕಲಿಂಗಪ್ಪ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.