ದಾವಣಗೆರೆ; ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮನೆಗಳು, ಭತ್ತ, ಅಡಿಕೆ ಸೇರಿದಂತೆ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಒಂದು ಎತ್ತು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿ ಒಟ್ಟು 79.40 ಲಕ್ಷ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ವಾಡಿಕೆಯ 2.2 ಮಿ.ಮೀ. ಮಳೆ ಆಗುತ್ತಿದ್ದು, ಇದೀಗ 13.6 ಮಿ.ಮೀ. ನಷ್ಟು ಮಳೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 1.0 ಮಿಮೀ ವಾಡಿಕೆ ಮಳೆಗೆ 19.5 ಮಿ.ಮೀ., ಹರಿಹರದಲ್ಲಿ 1.1 ಮಿ.ಮೀ.ಗೆ 17.2 ಮಿ.ಮೀ. ಮಳೆಯಾಗಿದೆ. ನ್ಯಾಮತಿಯಲ್ಲಿ 2.5 ಮಿ.ಮೀ. ವಾಡಿಕೆ ಮಳೆಗೆ14.1 ಮಿ.ಮೀ., ಜಗಳೂರಿನಲ್ಲಿ 1.9 ಮಿ.ಮೀ. ಮಳೆಗೆ 13.7 ಮಿ.ಮೀ.ನಷ್ಟು ಮಳೆ ಸುರಿದಿದೆ. ಚನ್ನಗಿರಿ2.5 ಮಿ.ಮೀ. ಮಳೆಗೆ 9.5 ಮಿ.ಮೀ.ನಷ್ಟು, ಹೊನ್ನಾಳಿ2.4 ಮಿ.ಮೀ.ಗೆ 9.0 ಮಿ.ಮೀ. ನಷ್ಟು ಮಳೆಯಾಗಿದೆ.
ಅತಿಯಾದ ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಚಿಕ್ಕಬೂದಿಹಾಳ ಇತರೆಡೆ ಆಲಿಕಲ್ಲು ಸಹಿತ ದೊಡ್ಡ ಹನಿಗಳ ಮಳೆಯ ಹೊಡೆತನಕ್ಕೆ ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಚಿಕ್ಕಬೂದಿಹಾಳ ಗ್ರಾಮದಲ್ಲಿ ಐ.ಎಂ. ಗಿರೀಶ ಎಂಬ ರೈತರಿಗೆ ಸೇರಿದ 2.5 ಎಕರೆ ಭತ್ತದ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಬಡ ರೈತರಿಗೆ ದಿಕ್ಕು ತೋಚದಂತಾಗಿದ್ದಾರೆ. ಇದೇ ತಾಲೂಕಿನಲ್ಲಿ 1 ಮನೆ ಭಾಗಶಃಹಾನಿಯಾಗಿದ್ದು,60 ಸಾವಿರದಷ್ಟುನಷ್ಟವಾಗಿದೆ. 150 ಎಕರೆ ಭತ್ತದ ಬೆಳೆ ಹಾನಿಯಾಗಿ, 30 ಲಕ್ಷ ಸೇರಿದಂತೆ ಒಟ್ಟು 30.60ಲಕ್ಷ ರು. ಗಳಷ್ಟು ನಷ್ಟವಾಗಿದೆ.
ಹರಿಹರ ತಾಲೂಕಿನ ವ್ಯಾಪ್ತಿಯಲ್ಲಿ 2 ಕಚ್ಚಾ
ಮನೆಗಳು ಭಾಗಶಃ ಹಾನಿಯಾಗಿದ್ದು, 30 ಸಾವಿರ ರು. ನಷ್ಟು ಹಾಗೂ 295 ಎಕರೆ ಭತ್ತದ ಬೆಳೆ ಹಾನಿಯಾಗಿದ್ದರಿಂದ 18.62 ಲಕ್ಷ ಸೇರಿದಂತೆ 18.93 ಲಕ್ಷ ಗಳಷ್ಟು ನಷ್ಟ ಸಂಭವಿಸಿದೆ. ಜಗಳೂರು ತಾಲೂಕಿನಲ್ಲಿ 1 ಕಚ್ಚಾ ಮನೆಗೆ ಧರೆಗುರುಳಿ, 4 ಲಕ್ಷ ರ. ಗಳಷ್ಟು, 10 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, 5 ಲಕ್ಷ ನಷ್ಟು ಹಾಗೂ 30 ಎಕರೆ ಅಡಿಕೆ ತೋಟ, 38 ಎಕರೆ ಬಾಳೆ ತೋಟ, 20 ಎಕರೆ ಪಪ್ಪಾಯಿ ಬೆಳೆ ಹಾನಿಯಾಗಿದ್ದು, 1 ಎತ್ತು ಸಾವನ್ನಪ್ಪಿದ್ದರಿಂದ ಸುಮಾರು 29.87 ಲಕ್ಷಗಳಷ್ಟು ನಷ್ಟ ಸಂಭವಿಸಿದೆ.
ಜಿಲ್ಲಾದ್ಯಂತ ಮಳೆಯಿಂದಾಗಿ ಮನೆಗಳು, ಭತ್ತ ಹಾಗೂ ತೋಟದ ಬೆಳೆಗಳು ಹಾನಿಗೀಡಾಗಿದ್ದರಿಂದ, ಸುಮಾರು 79.40 ಲಕ್ಷ ರು. ಗಳಷ್ಟು ನಷ್ಟವಾಗಿದೆ. ಸಂತ್ರಸ್ಥರಿಗೆ ಸರ್ಕಾರದ ಮಾರ್ಗ ಸೂಚಿಯನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



