ದಾವಣಗೆರೆ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಭಾರೀ ಮಳೆಗೆ ಇಂದು ಬೆಳಗ್ಗೆ ಮನೆಗೋಡೆ ಕುಸಿದು ಒಂದು ವರ್ಷ ಮಗು ಸಾವನ್ನಪ್ಪಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ಕೆಂಚಪ್ಪ ಎಂಬುವರ ಪುತ್ರಿ ಸ್ಫೂರ್ತಿ (1) ಸಾವನ್ನಪ್ಪಿದೆ. ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಮಗುವಿನ ತಂದೆ ಕೆಂಚಪ್ಪ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮಲಗಿದ್ದ ವೇಳೆ ಈ ಘಟನೆ ನಡೆದಿದೆ.