ದಾವಣಗೆರೆ: ಏ.3ಕ್ಕೆ ನವೀಕೃತ ದಾವಣಗೆರೆ ರೈಲ್ವೆ ನಿಲ್ದಾಣ ಉದ್ಘಾಟನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ಮಾಜಿ ಶಾಸಕ ದಿ. ಕೆ.ಮಲ್ಲಪ್ಪ ಅವರ ಸ್ಮರಣೆ ಹಾಗೂ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಅವರ ಜನ್ಮದಿನದ ಅಂಗವಾಗಿ ವೀರೇಶ್ ಅಭಿಮಾನಿ ಬಳಗದ ವತಿಯಿಂದ ನಗರದ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ಅಂತರ ರಾಜ್ಯ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಏಪ್ರಿಲ್ 03 ರಂದು ರೈಲ್ವೆ ನಿಲ್ದಾಣದ ಉದ್ಘಾಟನೆಗೆ ಪ್ರಸ್ತಾಪಿಸಲಾಗಿದೆ. ಅಂದು ಸಾಧ್ಯವಾಗದೇ ಇದ್ದರೆ, ಏಪ್ರಿಲ್ ತಿಂಗಳಲ್ಲಿ ಬೇರೆ ದಿನ ಉದ್ಘಾಟನೆಗೊಳ್ಳಲಿದೆ ಎಂದರು. ರೈಲ್ವೆ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರು ಇಡಬೇಕು ಎಂಬುದೂ ಸೇರಿದಂತೆ ಹಲವಾರು ಹೆಸರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.



