ದಾವಣಗೆರೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳ ಮೂಲಕ ಪ್ರತಿ ಕ್ವಿಂಟಾಲ್ ಗೆ 2,400 ರೂ.ಗಳಂತೆ ಮೆಕ್ಕೆಜೋಳ ಖರೀದಿಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ದಾವಣಗೆರೆ: ತುಂತುರು ನೀರಾವರಿ- ಶೇ. 90ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ
ರೂ. 2,400 ಬೆಂಬಲ ಬೆಲೆ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಟಾಸ್ಕ್ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗಿದೆ. ಅದರಂತೆ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ಗೆ ರೂ. 2400 ಬೆಂಬಲ ಬೆಲೆ ಘೋಷಿಸಿದ್ದು, ಪ್ರತಿ ರೈತರಿಂದ 20 ಕ್ವಿಂಟಾಲ್ ಜೋಳ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿದಿನ 3 ಸಾವಿರ ಕ್ವಿಂಟಾಲ್ ಖರೀದಿ
ಈ ಹಿನ್ನೆಲೆಯಲ್ಲಿ ಎಪಿಎಂಸಿಗೆ ಪ್ರತಿದಿನ 3 ಸಾವಿರ ಕ್ವಿಂಟಾಲ್ ಅವಕಾಶವಾಗುತ್ತಿವೆ. ಬೆಂಬಲ ಬೆಲೆ ಘೋಷಣೆಯಾದ ನಂತರ ಜಿಲ್ಲೆಯ ಕೃಷಿ ಮಾರುಕಟ್ಟೆಗಳಲ್ಲಿ ಪ್ರಸ್ತುತ ಪ್ರತಿ ಕ್ವಿಂಟಾಲ್ಗೆ ರೂ.1600 ರಿಂದ 1900ರ ವರೆಗೆ ಮಾರಾಟವಾಗುತ್ತಿದೆ. ಧಾನ್ಯ ಆಧಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಲರಿಗಳನ್ನು ಸಂಪರ್ಕಿಸಿ ಹತ್ತಿರದ ಪಿಸಿಎಸ್ಗಳ ಮೂಲಕ ಎಥೆನಾಲ್ಗೆ ಅಗತ್ಯಕ್ಕೆ ತಕ್ಕಂತೆ ಖರೀದಿಗೆ ತ್ವರಿತವಾಗಿ ಕ್ರಮವಹಿಸುವುದರ ಜತೆಗೆ ರೈತರಿಂದ ಖರೀದಿಸಿದ ಧಾನ್ಯಗಳ ಗುಣಮಟ್ಟ ಕಾಯ್ದುಕೊಳ್ಳಬೇಕು.
ದಾವಣಗೆರೆ: ಆಟೋಗಳಲ್ಲಿ ಅಳವಡಿಸಿದ್ದ ಅನಧಿಕೃತ ವಿನ್ಯಾಸಗಳ ತೆರವು | ನಿಯಮ ಉಲ್ಲಂಘನೆ ವಿರುದ್ಧ ಕ್ರಮ
ಅಬಕಾರಿ ಇಲಾಖೆ, ಸಹಕಾರ ಮಂಡಳವು ಜಿಲ್ಲೆಯಲ್ಲಿನ ಎಥನಾಲ್ ಉತ್ಪಾದಿಸುವ ಡಿಸ್ಟಿಲರಿಗಳನ್ನು ಸಂಪರ್ಕಿಸಿ ಖರೀದಿಗೆ ಬೇಕಾಗುವ ಅಂಕಿ ಅಂಶಗಳನ್ನು ಸಂಗ್ರಹಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಸಭೆಯಲ್ಲಿ ಆಹಾರ ಮತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೆ.ಪಿ. ಮಧು ಸೂದನ್, ಅಬಕಾರಿ ಉಪ ಆಯುಕ್ತ ಜುನೈದ್, ಸಹಕಾರ ಇಲಾಖೆ ಉಪ ನಿಬಂಧಕ ಮಧು ಶ್ರೀನಿವಾಸ್, ಎಪಿಎಂಸಿ ಇಲಾಖೆ ಗಿರೀಶ್ ನಾಯ್ಕ್ ಸೇರಿದಂತೆ ಮತ್ತಿತರರು ಇದ್ದರು.



