ದಾವಣಗೆರೆ; ಮರುಮೌಲ್ಯಮಾಪನದ ಫಲಿತಾಂಶದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಂಶಿಕ್ 593 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ್ದಾರೆ.
ಅಂಶಿಕ್ ಚನ್ನಗಿರಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞಡಾ.ಅಶೋಕ್ ಅವರ ಪುತ್ರ. ಪರೀಕ್ಷಾ
ಫಲಿತಾಂಶದಲ್ಲಿ 588 ಅಂಕಗಳು ಬಂದಿದ್ದವು.
ಕಡಿಮೆ ಅಂಕಗಳು ಬಂದಿವೆ ಎಂದು ಮರು
ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರು
ಮೌಲ್ಯ ಮಾಪನದಲ್ಲಿ ಅಂಕಗಳು ಹೆಚ್ಚುವರಿಯಾಗಿ 5 ಲಭಿಸಿ, 593 ಅಂಕಗಳು ಗಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿ ಎಂಬ ಕೀರ್ತಿ ಪಡೆದಿದ್ದಾರೆ.



