ದಾವಣಗೆರೆ: ದ್ವೀತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಕಲಾ ವಿಭಾಗದಲ್ಲಿ ನ್ಯಾಮತಿಯ ಪ್ರಿಯಾಂಕ, ವಾಣಿಜ್ಯ ವಿಭಾಗದಲ್ಲಿ ದಾವಣಗೆರೆಯ ಜೀಯಾ ಹಾಗೂ ವಿಜ್ಞಾನ ವಿಭಾಗದಲ್ಲಿ ಕಾವ್ಯ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ನ್ಯಾಮತಿ ತಾಲ್ಲೂಕಿನ ಬೆಳಗುತ್ತಿಯ ಶ್ರೀ ತೀರ್ಥಲಿಂಗೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಿಯಾಂಕ.ಡಿ.ಆರ್ ಶೇ.97.5(585) ಅಂಕ ಗಳಿಸಿ ಪ್ರಥಮ ಸ್ಥಾನ, ಜಗಳೂರು ತಾಲ್ಲೂಕಿನ ಕಮಂಡಲಗೊಂದಿ ವಾಸುದೇವರೆಡ್ಡಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಲಕ್ಷ್ಮೀ ಜಿ.ಟಿ ಶೇ.96.3(578) ದ್ವೀತಿಯ ಸ್ಥಾನ, ನಲಾಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಭವಾನಿ ಜಿ.ಟಿ ಶೇ.95.83(575) ಹಾಗೂ ಹರಿಹರ ತಾಲ್ಲೂಕಿನ ಗಿರಿಜಮ್ಮ ಕಾಂತಪ್ಪ ಶ್ರೇಷ್ಠಿ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಪೂರಾಭಾನು ಶೇ.95.83(575) ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದಾವಣಗೆರೆ ಎಸ್‍ಎಂವಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಜೀಯಾ ಎಂ ಚೈನ್ ಶೇ.98.16(589) ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಆರ್.ಜಿ.ಕಾಲೇಜಿನ ವಿದ್ಯಾರ್ಥಿ ದಿಶಾ ಅ ಜೈನ್ ಶೇ.98 (588)ಹಾಗೂ ಬಾಪೂಜಿ ಎಸ್‍ಪಿಎಸ್‍ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಚೈತ್ರ ಶೇ.98(588), ಸರ್ ಎಂ.ವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸೃಷ್ಠಿ ಎಂ.ಎಸ್ ಶೇ.97.83(587), ಹಾಗೂ ಕಾರ್ತಿಕ್.ಜಿ ಶೇ.97.83(587) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಇನ್ನು ವಿಜ್ಞಾನ ವಿಭಾಗದಲ್ಲಿ ಶಿರಮಾಗೊಂಡನಹಳ್ಳಿಯ ವಿಶ್ವ ಚೇತನ ಪದವಿಪೂರ್ವ ಕಾಲೇಜಿನ ಕಾವ್ಯ ಎಂ.ಜಿ ಶೇ.99.16(595) ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಹಾಗೂ ಮುರಿಕಿ ಶ್ರಿ ಬಾರುಣಿ ಶೇ.98.83(593), ಸಿದ್ದಗಂಗಾ ಪದವಿಪೂರ್ವ ಕಾಲೇಜಿನ ವಿನಾಯಕ.ಎಲ್ ಶೇ.98.83(593), ಶಿರಮಾಗೊಂಡನಹಳ್ಳಿಯ ವಿಶ್ವ ಚೇತನ ಪದವಿಪೂರ್ವ ಕಾಲೇಜಿನ ಭುವನ.ಎ ಶೇ.98.83(593) ಅಂಕಗಳನ್ನು ಪಡೆದು ದ್ವೀತಿಯ ಸ್ಥಾನವನ್ನು, ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ರಕ್ಷಿತ.ಜಿ.ಡಿ ಶೇ.98.66(592) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.



