ದಾವಣಗೆರೆ: ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಗೆ 19ನೇ ಸ್ಥಾನ ಬಂದಿದೆ. 2020-21ರಲ್ಲಿ ಶೇ.100 ರಷ್ಟು ಫಲಿತಾಂಶ (ಕೊರೊನಾ ಕಾರಣ) 2019-20ರಲ್ಲಿ ಜಿಲ್ಲೆ 19ನೇ ಸ್ಥಾನ ಪಡೆದಿತ್ತು. ಇದೀಗ ಮತ್ತೆ 19ನೇ ಸ್ಥಾನದಲ್ಲಿಯೇ ಮಂದುವರಿದಿದೆ.ನಗರ ಪ್ರದೇಶದಲ್ಲಿ ಶೇ 59.11 ಹಾಗೂ ಗ್ರಾಮೀಣ ಪ್ರದೇಶದಲ್ಲಿ 57.09 ಪಾಸಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 19,725 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 11,568 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 17,722 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ತೆಗೆದುಕೊಂಡವರಾಗಿದ್ದು, 312 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆದಿದ್ದಾರೆ. 1,691 ವಿದ್ಯಾರ್ಥಿಗಳು ಪುನರಾವರ್ತಿತರಾಗಿದ್ದಾರೆ.
ಕಲಾ ವಿಭಾಗದಲ್ಲಿ 6302 ವಿದ್ಯಾರ್ಥಿಗಳಲ್ಲಿ 2473 ವಿದ್ಯಾರ್ಥಿಗಳಿಂದ ಶೇ 39.24 , ವಾಣಿಜ್ಯ ವಿಭಾಗದಲ್ಲಿ 4874 ವಿದ್ಯಾರ್ಥಿಗಳಲ್ಲಿ 2805 ವಿದ್ಯಾರ್ಥಿಗಳಿಂದ ಶೇ 57.55 ಹಾಗೂ ವಿಜ್ಞಾನ ವಿಭಾಗದಲ್ಲಿ 8549 ವಿದ್ಯಾರ್ಥಿಗಳಲ್ಲಿ 6290 ವಿದ್ಯಾರ್ಥಿಗಳಿಂದ ಶೇ 73.58 ಫಲಿತಾಂಶ ಬಂದಿದೆ.



