ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ 3.87 ಕೋಟಿ ಅನುದಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯು ಸಿಎಸ್ ಆರ್ ಫಂಡ್  ಅಡಿಯಲ್ಲಿ  ಜಿಲ್ಲಾ ಚಿಗಟೇರಿ ಆಸ್ಪತ್ರೆಯ ವೈದ್ಯಕೀಯ ಸಲಕರಣೆಗಳಿಗೆ 3.87 ಕೋಟಿ ರೂ. ನೀಡಿದೆ ಎಂದು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿರ್ದೇಶಕ ಕೆ.ಎನ್ ಓಂಕಾರಪ್ಪ ಹೇಳಿದರು.

ಪವರ್ ಗ್ರಿಡ್ ಸಂಸ್ಥೆ ಸಿಎಸ್ ಆರ್ ಫಂಡ್ ನೆರವಿನ ಒಡಂಬಡಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ 100ಕೋಟಿ ರೂ.ಗಳ ಅನುದಾನ ಲಭ್ಯವಿದ್ದು, ಪ್ರಸ್ತುತ 25 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಗೆ ಪ್ರಥಮವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪವರ್ ಗ್ರೀಡ್ ಸಂಸ್ಥೆಯಿಂದ ಅನುದಾನ ಬಿಡುಗಡೆ ಆಗುತ್ತಿದೆ. ಇನ್ನು ಹೆಚ್ಚಿನದಾಗಿ ಜಿಲ್ಲೆಯ ಪೊಲೀಸ್ ಇಲಾಖೆ ಮತ್ತು ಪಾಲಿಕೆಯ ಬೇಡಿಕೆಗಳನ್ನು ಸಹ ಈಡೇರಿಸಬೇಕು. ದಾವಣಗೆರೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ, ವಿವಿಧ ರಾಜ್ಯಗಳ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದರು.

ನವದೆಹಲಿ ಮತ್ತು ಗುರುಗ್ರಾಮದಲ್ಲಿ ಕರೆಂಟ್ ನ್ನು ಒಂದು‌ ದೇಶದಿಂದ ಮತ್ತೊಂದು ದೇಶ ಹಾಗೂ ರಾಜ್ಯಕ್ಕೆ ಸರಬರಾಜು ಮಾಡುವ ಕೇಂದ್ರಗಳಿದ್ದು, ನೆರೆಯ ದೇಶಗಳಿಗೆ ಇದೇ ಸಂಸ್ಥೆಯ ಅಡಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.23 ದೇಶದಲ್ಲಿ‌ ಕೆಲಸ ಮಾಡುತ್ತಿದೆ. 265 ಸಬ್ ಸ್ಟೇಷನ್ ಗಳಿವೆ. ನಮ್ಮದೇಶದ ಸುತ್ತಮುತ್ತಲಿನ ದೇಶಗಳಿಗೆ ಕರೆಂಟ್ ಲಿಂಕ್‌ಮಾಡುವ ಏಕೈಕ‌ ಸಂಸ್ಥೆ ಪಿಜಿಸಿಎಲ್. ಸೋಲಾರ್ ಪವರ್ ಜನರೇಟ್ ಮಾಡುತ್ತದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ‌ ದೊಡ್ಡ ಪ್ರಮಾಣದಲ್ಲಿದೆ. ಕಳೆದ ವರ್ಷ 17384 ಕೋಟಿ ಲಾಭದಲ್ಲಿದೆ ಎಂದು ಮಾಹಿತಿ ನೀಡಿದರು.

ಈವರೆಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ದಕ್ಷಿಣ ಭಾರತದಿಂದ ಯಾವ ಪ್ರತಿನಿಧಿ ನೇಮಕ ಆಗಿರಲಿಲ್ಲ. ಇದೀಗ ನಾನು‌ ನಿರ್ದೇಶಕನಾಗಿದ್ದೇನೆ. ಈ ಹಿಂದೆ ಕರ್ನಾಟಕ‌, ಕೇರಳ, ಅನುದಾನ ಬಂದಿರಲಿಲ್ಲ. ನಾನು ಅಧಿಕಾರ ವಹಿಸಿಕೊಂಡ ಮೇಲೆ ಸಿಜಿ ಆಸ್ಪತ್ರೆಗೆ 3,87,26000 ಅನುದಾನ ಬಿಡುಗಡೆ ಆಗಿದೆ. ಇದರಲ್ಲಿ  ಅಲ್ಟ್ರಾಸೌಂಡ್, ರೆಫ್ರಜರೇಟರ್, ಲ್ಯಾಪ್ರಾಸ್ಕೋಪಿ, ಎಂಡೋಸ್ಕೋಪಿ, ಎಲೆವೇಟರ್ ಸೇರಿದಂತೆ ಇತರೆ ಅಗತ್ಯ ಪರಿಕರಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಹೆಚ್.ಎಸ್.ಲಿಂಗರಾಜ್, ಗಣೇಶ್ ಕರೂರು, ಡಿ.ಎಸ್.ಜಯಣ್ಣ, ಕೆ.ಪದ್ಮನಾಭ ಶೆಟ್ಟಿ, ಆರ್. ಪ್ರತಾಪ್, ಅಜ್ಜಯ್ಯ, ಚಂದ್ರಪ್ಪ, ಕಿಶೋರ್ ಕುಮಾರ್  ಇದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *