ದಾವಣಗೆರೆ: ನಗರದ ತ್ರಿಶೂಲ್ ಫೀಡರ್ ನಲ್ಲಿ ಬೆ.ವಿ.ಕಂ. ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮಾ.20 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ತ್ರಿಶೂಲ್ ಫೀಡರ್ ವ್ಯಾಪ್ತಿಯ ಕೆ.ಬಿ. ಬಡಾವಣೆ, ಲಾಯರ್ ರಸ್ತೆ, ದೀಕ್ಷಿತ್ ರಸ್ತೆ, ಬಿಲಾಲ್ ಕಾಂಪೌಂಡ್, ಪಿ.ಬಿ. ರಸ್ತೆಯ (ಗಾಂಧಿ ಸರ್ಕಲ್ ನಿಂದ ಈರುಳ್ಳಿ ಮಾರ್ಕೆಟ್ ವರೆಗೆ) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



