ದಾವಣಗೆರೆ: ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ವಿದ್ಯಾನಗರ ಫೀಡರ್‍ನಲ್ಲಿ ಕೆ.ಯು.ಐ.ಡಿ.ಎಫ್ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮಾ.04 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮಹಾನಗರಪಾಲಿಕೆ ಫೀಡರ್ ವ್ಯಾಪ್ತಿಯ ಹಳೆ ಬಸ್ ನಿಲ್ದಾಣ, ಹೈಸ್ಕೂಲ್‍ಮೈದಾನ ಬಸ್ ನಿಲ್ದಾಣ, ಜಾಯ್‍ಅಲುಕಾಸ್, ಬಿಗ್ ಬಜಾರ್, ಪಿ.ಡಬ್ಲೂ.ಡಿ ವಸತಿ ಗೃಹಗಳು, ಆಕ್ಸಿಸ್ ಬ್ಯಾಂಕ್ ಕಟ್ಟಡ, ಸುರಭಿ ಅಪಾರ್ಟ್‍ಮೆಂಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ವಿದ್ಯಾನಗರ ಫೀಡರ್ ವ್ಯಾಪ್ತಿಯ ಶಿವಕುಮಾರಸ್ವಾಮಿ ಬಡಾವಣೆ 1ನೇ ಹಂತ, ಹದಡಿ ರಸ್ತೆ,ಐ.ಟಿ.ಐ. ಕಾಲೇಜು ಮತ್ತು ಸುತ್ತ ಮುತ್ತಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



