ದಾವಣಗೆರೆ: 66/11 ಕೆ.ವಿ. ವಿ.ವಿ. ಕೇಂದ್ರದಿಂದ ಹೊರಡುವ ಡಿ ಸಿ ಎಂ, ಜಯನಗರ, ಮತ್ತು ಮಹಾನಗರಪಾಲಿಕೆ ಫೀಡರ್‍ಗಳಲ್ಲಿ ಹಾಗೂ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಸರಸ್ವತಿ ಮತ್ತು ರಂಗನಾಥ ಫೀಡರ್ ಗಳಲ್ಲಿ ಕ.ವಿ.ಪ್ರ.ನಿ.ನಿ /ಬೆ.ವಿ.ಕಂ./ ಕೆ.ಯು.ಐ.ಡಿ.ಎಫ್ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಫೆ.26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ.ಸಿ.ಎಂ. ಫೀಡರ್ ಶ್ರೀರಾಮ ಬಡಾವಣೆ, ಡಿ.ಸಿ.ಎಂ. ಟೌನ್‍ಶಿಪ್, ಶಕ್ತಿನಗರ, ಅಂಬಿಕಾ ನಗರ, ಕೊಟ್ಟೂರೇಶ್ವರ ಬಡಾವಣೆ, ಜಯನಗರ, ಶೇಖರಪ್ಪ ಗೋಡೌನ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಜಯನಗರ ಫೀಡರ್‍ನ ವ್ಯಾಪ್ತಿಯ ಜಯನಗರ ಸಿ ಬ್ಲಾಕ್, ಭಗೀರಥ ಸರ್ಕಲ್, ಜಯನಗರ ಚರ್ಚ್, ಹಾಗು ಸುತ್ತ ಮುತ್ತಲಿನ ಪ್ರದೇಶಗಳು.
ಮಹಾನಗರಪಾಲಿಕೆ 11 ಕೆ.ವಿ. ಫೀಡರ್‍ನ ವ್ಯಾಪ್ತಿಯ ಹಳೆ ಬಸ್ ನಿಲ್ದಾಣ, ಹೈಸ್ಕೂಲ್ ಬಸ್ ನಿಲ್ದಾಣ, ಜಾಯ್ ಅಲುಕಾಸ್, ಬಿಗ್ ಬಜಾರ್, ಪಿ.ಡಬ್ಲೂ.ಡಿ ವಸತಿ ಗೃಹಗಳು, ಆಕ್ಸಿಸ್ ಬ್ಯಾಂಕ್ ಕಟ್ಟಡ, ಸುರಭಿ ಅಪಾರ್ಟ್‍ಮೆಂಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ರಂಗನಾಥ ಫೀಡರ್‍ನ ವ್ಯಾಪ್ತಿಯ ತರಳಬಾಳು ಬಡಾವಣೆ, ವಾಣಿ ರೈಸ್ ಮಿಲ್, ಮಾಗನೂರು ಬಸಪ್ಪ ಮೈದಾನ ಸುತ್ತ ಮುತ್ತಲಿನ ಪ್ರದೇಶಗಳು. ಸರಸ್ವತಿ ಫೀಡರ್‍ನ ವ್ಯಾಪ್ತಿಯ ಸರಸ್ವತಿ ಬಡಾವಣೆ ಎ, ಬಿ & ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಬಡಾವಣೆ, ಜಯನಗರ ಎ & ಬಿಬ್ಲಾಕ್,ಎಸ್.ಎಸ್.ಹೈಟೆಕ್ ಆಸ್ಪತ್ರೆ ರಸ್ತೆ,ಸಾಯಿ ಬಾಬ ದೇವಸ್ಥಾನದ ಸುತ್ತಮುತ್ತ, ಲಕ್ಷ್ಮೀ ಬಡಾವಣೆ ಹಾಗೂ ಸುತ್ತಮತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.