ದಾವಣಗೆರೆ: ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್16-ಎಸ್‍ಜೆಎಮ್ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯವಿದ್ದು, ಇಂದು (ಸೆ.06) ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕೊಂಡಜ್ಜಿ ರಸ್ತೆ, ಎಸ್‍ಜೆಎಮ್ ನಗರ, ಸೇವಾದಳ ಕಾಲೋನಿ, ಹೊಸಕ್ಯಾಂಪ್, ಎಸ್‍ಎಮ್‍ಕೆ ನಗರ 2ನೇ ಹಂತ, ವೀರಾಂಜನೇಯ ಪೆಟ್ರೋಲ್ ಬಂಕ್ ಹತ್ತಿರ, ಬಿ.ಜೆ.ಎಮ್ ಸ್ಕೂಲ್, ಆರ್‍ಟಿಓ ಆಫೀಸ್, ಬೂದಿಹಾಳ್ ರಸ್ತೆ, ಬಾಬು ಜಗಜೀವನ್‍ರಾಮ್ ನಗರ, ಗೌರಸಂದ್ರ ಮಾರಮ್ಮ ದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



