ದಾವಣಗೆರೆ: ದಾವಣಗೆರೆ ನಗರ ಉಪ ವಿಭಾಗ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ ಈ ಕೆಳಕಂಡ ಫೀಡರ್‍ಗಳ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಜ.13) ಬೆಳಗ್ಗೆ 10 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ತ್ರಿಶೂಲ್ ಫೀಡರ್ ಎಪ್13: ಪಿ ಬಿ ರೋಡ್, ರಿಲಯನ್ಸ ಮಾರ್ಕೆಟ್, ಸುಲ್ತಾನ್ ಡೈಮೈಂಡ್ಸ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ಜಯನಗರ ಫೀಡರ್ ಎಫ್14: ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ, 60 ಅಡಿ ರಸ್ತೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಸ್ವಿಮ್ಮಿಂಗ್ ಪೂಲ್ ಫೀಡರ್ ಎಫ್ 15: ಬಾಪೂಜಿ ಬ್ಯಾಂಕ್ (ಹದಡಿ ರಸ್ತೆ), ಬಾಪೂಜಿ ಡೆಂಟಲ್ ಕಾಲೇಜ್ ಮತ್ತು ಬಾಪೂಜಿ ಆಸ್ಪತ್ರೆ, ಜೆ.ಜೆ.ಎಮ್. ಮೆಡಿಕಲ್ ಕಾಲೇಜ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ಮತ್ತು ವಸತಿ ಗೃಹಗಳು, ಮ್ಯಾಕ್ಸ್ ಷೋ ರೂಂ, ಬಿ.ಎಸ್ ಚನ್ನಬಸಪ್ಪ ಎಕ್ಸ್ಲೂಸಿವ್ ಷೋರೂಂ, ಕೆ.ಎಫ್.ಸಿ., ಡಿ.ಆರ್.ಎಮ್ ಕಾಲೇಜ್, ಎ.ಆರ್.ಜಿ ಕಾಲೇಜ್ ಹಾಗೂ ಸುತ್ತಮುತ್ತಲ ಪ್ರದೇಶಗಳು.
ಎಸ್. ನಿಜಲಿಂಗಪ್ಪ ಫೀಡರ್ ಎಫ್16: ನಿಜಲಿಂಗಪ್ಪ ಬಡಾವಣೆ, ರಿಂಗ್ ರೋಡ್, ಕುಂದವಾಡ ರಸ್ತೆ, ಯಲ್ಲಮ್ಮ ನಗರ, ವಿನೋಬನಗರ 4ನೇ ಮೇನ್, 3ನೇ ಮೇನ್ ಹಾಗೂ ಸುತ್ತ ಮುತ್ತಲ ಪ್ರದೇಶಗಳು.ಮಹಾನಗರಪಾಲಿಕೆ ಫೀಡರ್‍ಎಫ್ 17: ಹಳೆ ಬಸ್ ನಿಲ್ದಾಣ, ಹೈಸ್ಕೂಲ್ ಬಸ್ ನಿಲ್ದಾಣ, ಜಾಯ್ ಅಲುಕಾಸ್, ಬಿಗ್‍ಬಜಾರ್, ಪಿ.ಡಬ್ಲೂ.ಡಿ ವಸತಿ ಗೃಹಗಳು, ಆಕ್ಸಿಸ್ ಬ್ಯಾಂಕ್ ಕಟ್ಟಡ, ಸುರಭಿ ಅಪಾರ್ಟ್‍ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎಸ್.ಐ ಫೀಡರ್ ಎಫ್19: ಇ.ಎಸ್.ಐ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಾವಣಗೆರೆ ಗ್ರಾಮೀಣ ಉಪ ವಿಭಾಗ ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಮ್‍ವಿಎ ಎನ್‍ಜಿಇಎಫ್ ಮತ್ತು 20 ಎಮ್‍ವಿಎ ಬಿಬಿಎಲ್ ಪರಿವರ್ತಕದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಜ. 13 ರಂದು ಬೆಳಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಎಫ್-21 ಎನ್,ಜೆ. ತರಳುಬಾಳು ಫೀಡರ್ ಗ್ರಾಮಗಳಾದ ಹೊಸ ಬಿಸಿಲೇರಿ, ಹಳೇ ಬಿಸಿಲೇರಿ, 6ನೇ ಕಲ್ಲು, 7ನೇ ಕಲ್ಲು ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



