ದಾವಣಗೆರೆ: ದಾವಣಗೆರೆ ನಗರ ಉಪ ವಿಭಾಗ-1 ವ್ಯಾಪ್ತಿಯ ಎಮ್.ಸಿ.ಸಿ.ಬಿ, ಜಿ. ಅಂಡ್ ಎಸ್ ಫೀಡರ್ ಮತ್ತು ತ್ರಿಶೂಲ್ ಫೀಡರ್‍ನಲ್ಲಿ 24*7 ಜಲಸಿರಿ & ಸ್ಮಾರ್ಟ ಸಿಟಿ ಲಿಮಿಟೆಡ್ ವತಿಯಿಂದ ಫುಟ್‍ಪಾತ್ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ. 07 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಂ.ಸಿ.ಸಿ. ಬಿ ಎಫ್2 ಫೀಡರ್: ಜ.07 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 04 ಗಂಟೆಯವರೆಗೆ ಎಸ್. ಎಸ್ ಲೇಔಟ್ ಎ ಬ್ಲಾಕ್, ಎಸಿಬಿ ಕಛೇರಿ ರಸ್ತೆ, ಅಂಗವಿಕಲ ಸ್ಕೂಲ್, ಎಸ್. ಎನ್ ಲೇಔಟ್, ಲಕ್ಷ್ಮೀ ಫ್ಲೋರ್‍ಮಿಲ್ ಹಾಗೂ ಸುತ್ತ ಮುತ್ತ ಪ್ರದೇಶಗಳು. ಜಿ. ಅಂಡ್ ಎಸ್ ಫೀಡರ್ : ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಪಿ.ಬಿ. ರಸ್ತೆ., ಕೆಎಸ್‍ಆರ್‍ಟಿಸಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ಮತ್ತು ತ್ರಿಶೂಲ್ ಫೀಡರ್: ಪಿ ಬಿ ರೋಡ್, ರಿಲಯನ್ಸ ಮಾರ್ಕೆಟ್, ಸುಲ್ತಾನ್ ಡೈಮೆಂಡ್ಸ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಕಾಡಜ್ಜಿ ವಿದ್ಯುತ್ ವಿತರಣಾ ಕೇಂದ್ರದ ಎಫ್-4 ಶ್ರೀರಾಮ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಜ.07 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ರವರೆಗೆ ಎಫ್-4 ಶ್ರೀರಾಮ್ ಮಾರ್ಗದ ಗ್ರಾಮಗಳಾದ ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಬಸವನಾಳ್, ಬಸವನಾಳ್ ಗೊಲ್ಲರಹಟ್ಟಿ, ಬೇತೂರು, ಪುಟ್ಟಗನಾಳ್ ಮತ್ತು ರೆಡ್ಡಿ ಕ್ಯಾಂಪ್ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆವರಗೆರೆ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.07 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6.30 ರವರೆಗೆ ಆವರಗೆರೆ, ಬಾಡ ಕ್ರಾಸ್, ಬಸಾಪುರ, ಹಳೇಚಿಕ್ಕನಹಳ್ಳಿ, ಹೊಸಚಿಕ್ಕನಹಳ್ಳಿ, ಐಗೂರು, ವಡ್ಡಿನಹಳ್ಳಿ, ಹೊನ್ನೂರು, ಎಚ್.ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ, ಕರೀಲಕ್ಕೇನಹಳ್ಳಿ ಮತ್ತು ಚಟ್ಟೋಬನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಾವಣಗೆರೆ ಎಸ್.ಆರ್.ಎಸ್. ಸ್ವೀಕರಣಾ ಕೇಂದ್ರದಿಂದ ಸರಬರಾಜು ಆಗುವ 66 ಕೆವಿ ವಿದ್ಯುತ್ ಮಾರ್ಗದ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜ.07 ರಂದು ಬೆಳಗ್ಗೆ 10 ರಿಂದ ಸಂಜೆ 05 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆನಗೋಡು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಹೆಬ್ಬಾಳು, ಆರಾಧ್ಯ ಕೈಗಾರಿಕೆ, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಗಿ, ಕೊಗ್ಗನೂರು, ಚಿನ್ನಸಮುದ್ರ, ಆನಗೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳು. ಅತ್ತಿಗೆರೆ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ತೋಳಹುಣಸೆ, ಕುರ್ಕಿ, ಕಬ್ಬೂರು, ಗೋಪನಾಳ್, ಕಂದಗಲ್ಲು, ಬಾಡ ಅತ್ತಿಗೆರೆ, ಅತ್ತಿಗೆರೆ, ಹನುಮನಹಳ್ಳಿ, ಹಿರೇತೊಗಲೇರಿ, ರಾಮಗೊಂಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು. ಮಾಯಕೊಂಡ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಬಿ.ದುರ್ಗ, ದಿಂಡದಹಳ್ಳಿ, ನರಗನಹಳ್ಳಿ, ಮಾಯಕೊಂಡ, ಬುಳ್ಳಾಪುರ, ಕೊಡಗನೂರು, ಹೆಚ್.ಬಸಾಪುರ, ಬಾಡ ಮಾಯಕೊಂಡ, ನಲ್ಕುಂದ, ಬೊಮ್ಮೆನಹಳ್ಳಿ, ಬಾವಿಹಾಳು, ಅಣಬೇರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.