ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕೆಳಕಂಡ ವಿದ್ಯುತ್ ಮಾರ್ಗಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಅಡಿಯಲ್ಲಿ ಕೆ.ಯು.ಐ.ಡಿ.ಎಫ್.ಸಿ ಮತ್ತು ಜಲ ಸಿರಿ ವತಿಯಿಂದ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಡಿ. 30 ರಂದು ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ.
ಎಸ್.ವಿ.ಟಿ ಫೀಡರ್ ಎಫ್1 ರಲ್ಲಿ ಡಿ. 30 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರಗೆ ಶ್ರೀನಿವಾಸ್ ನಗರ 1ನೇ ಅಡ್ಡರಸ್ತೆ ಯಿಂದ 6ನೇ ಅಡ್ಡರಸ್ತೆಯವರಿಗೆ, ಭದ್ರ ಕಾಲೊನಿ, ಹದಡಿರೋಡ್, ಇನ್‍ಕಂಟ್ಯಾಕ್ಸ್ ಬಿಲ್ಡಿಂಗ್, ಡಿಆರ್‍ಆರ್ ಹಾಸ್ಟಲ್, ಅನುಭವ ಮಂಟಪ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮೌನೇಶ್ವರ ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರಗೆ ಹೆಚ್.ಕೆ.ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ ಹಾಗು ಇ.ಎಸ್.ಐ.ಆಸ್ಪತ್ರೆ, ಕೆ.ಟಿ.ಜೆ ನಗರ ಪೋಲಿಸ್ ಠಾಣೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



