ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಗುತ್ತೂರಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ನ.18ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ..?
ಗುತ್ತೂರು ಗ್ರಾಮ, ಗುತ್ತೂರು ಐಪಿ ವಲಯ, ದೊಗ್ಗಳ್ಳಿ, ಗಂಗನರಸಿ,ಗಂಗನರಸಿ ಕ್ಯಾಂಪ್, ದೀಟೂರು ಹಾಗೂ ಹಲಸಬಾಳು 66/11 ಕೆರೆಗಳಿಗೆ ನೀರುಪೂರೈಸುವ ಘಟಕ, ಪಾಮೇನಹಳ್ಳಿ, ಕರಲಹಳ್ಳಿ ಕ್ಯಾಂಪ್, ನಗರ ಪ್ರದೇಶಗಳಾದ ಕೈಗಾರಿಕಾ ಪ್ರದೇಶ, ಚಿಂತಾಮಣಿ ನಗರ, ಹಂಸಾಗರ್ ಕಾಂಪೌಂಡ್, ಹಳೆ ಹರ್ಲಾಪುರ,ನೀರು ಸರಬರಾಜು ಕೇಂದ್ರ, ಅಮರಾವತಿ ಕಾಲೊನಿ, ಮಜ್ಜಿಗೆ ಲೇಔಟ್, ಆಶ್ರಯ ಕಾಲೊನಿ, ವಿಜಯನಗರ, ಕೆ.ಆರ್.ನಗರ, ಹೊಸ ಹರ್ಲಾಪುರ, ಬಸ್ ಡಿಪೋ ರಸ್ತೆ.
ಕಿರ್ಲೋಸ್ಕರ್ ಕಾಲೊನಿ, ಹಳೆ ಪಿ.ಬಿ. ರಸ್ತೆ, ಭರಂಪುರ, ಕೆಐಎಡಿಬಿ ಕೈಗಾರಿಕಾ ಪ್ರದೇಶ,ಕೆ.ಎಚ್.ಬಿ. ಕಾಲೊನಿ, ಅಮರಾವತಿ ಗ್ರಾಮ, ಅಂಜನೇಯ ಬಡಾವಣೆ, ಪೊಲೀಸ್
ಕಾಲೊನಿ, ಕೇಶವನಗರ, ರೈಲ್ವೆ ಮತ್ತು ಬಸ್ ನಿಲ್ದಾಣ, ಟಿಪ್ಪು ನಗರ, ಪಟೇಲ್ ಬಡಾವಣೆ.
ಹರಿಹರ-ಹೊಸಪೇಟೆ ವಿದ್ಯುತ್ ಕೇಂದ್ರ: ಹರಿಹರ-ಹೊಸಪೇಟೆ, ನಂದಿಗಾವಿಯ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆಯಾಗುವ ರಾಜನಹಳ್ಳಿ, ಹರಗನಹಳ್ಳಿ, ಹಳಸಬಾಳು, ಹೊಸಳ್ಳಿ, ತಿಮ್ಲಾಪುರ, ಹಳಸಬಾಳು 66/11 ಕೆ.ವಿ.ಯ
ಜಾಕ್ವೆಲ್ ಕೆರೆಗಳ ನೀರು ಪೂರೈಸುವ ಘಟಕ, ನಂದಿಗಾವಿ, ಧೂಳೆಹೊಳೆ, ಬಿಳಸನೂರಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.



