ದಾವಣಗೆರೆ: ಆನಗೋಡು 66/11 ಕೆವಿ ಉಪ ಕೇಂದ್ರದ 11 ಕೆವಿ ಮಾರ್ಗಗಳ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಆ.20 ಮತ್ತು 21ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಆನಗೋಡು, ಬುಳ್ಳಾಪುರ ಬಸವನಗರಿ ಬಡಾವಣೆ, ಚಿನ್ನಸಮುದ್ರ, ದೊಡ್ಡರಂಗವ್ವನಹಳ್ಳಿ, ಈಚಘಟ್ಟ, ಗಂಗನಕಟ್ಟೆ, ಹಾಲುವರ್ತಿ, ಹನುಮೇನಹಳ್ಳಿ, ಹೆಬ್ಬಾಳು, ಜಂಪೇನಹಳ್ಳಿ, ಕೊಗ್ಗನೂರು, ನರಸೀಪುರ, ನೀರ್ಥಡಿ, ನೇರ್ಲಿಗೆ ಸುಲ್ತಾನಿಪುರ, ಶಿವಪುರ, ಉಳುಪಿನಕಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



